

ಹನುಮಸಾಗರ: ತಾಯಂದಿರು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕೆಂದು ಬಳೂಟಗಿ ಶಿವಕುಮಾರ ದೇವರು ಹೇಳಿದರು.
ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ಜಾತ್ರೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಂದಿರು ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಎತ್ತಿ ಹಿಡಿಯಬೇಕು. ಕುಟುಂಬವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದರು.
ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರವಚನಕಾರ ಸದಾನಂದಯ್ಯ ಶಾಸ್ತ್ರೀ ಹಿರೇಮಠ, ಸಂಗೀತಕಾರ ಕಲ್ಯಾಣಕುಮಾರ ಭಂಟನಹಳ್ಳಿ, ತಬಲವಾದಕ ಪ್ರತಾಪ ಹಿರೇಮಠ, ಮುಖಂಡರಾದ ಸಿದ್ಧಯ್ಯ ಬಾಳಿಹಳ್ಳಮಠ, ಶೇಖಪ್ಪ ದೋಟಿಹಾಳ, ಪ್ರಶಾಂತ ಗಡಾದ, ಮಲ್ಲಯ್ಯ ಕೋಮಾರಿ, ಬಸವರಾಜ ಚಿನಿವಾಲರ, ಸಿದ್ಧಣ್ಣ ಕಂಪಲಿ, ಈರಣ್ಣ ಹುನಗುಂಡಿ, ಮಹಾಂತಯ್ಯ ಕೋಮಾರಿ, ಶರಣಪ್ಪ ಹುಬ್ಬಳಿ, ಬಸಪ್ಪ ದೋಟಿಹಾಳ, ಶ್ರೀಶೈಲ ಮೋಟಗಿ, ಬಸವರಾಜ ದ್ಯಾವಣ್ಣನವರ, ಸಿದ್ಧರಾಮಯ್ಯ ಕರಕಂಠಿಮಠ, ನಾಗಯ್ಯ ಹಿರೇಮಠ ಹಾಗೂ ಶ್ರೀ ಪತ್ರಿಬಸವೇಶ್ವರ ಯುವಕ ಸಂಘದವರು ಇದ್ದರು.