ಬಿತ್ತನೆ ಬೀಜ ಖರೀದಿಸುವಾಗ ಕೋವಿಡ್ ನಿಯಮ ಪಾಲಿಸಿ

Hanumasagara Sowing Seed Distribute
ಹನುಮಸಾಗರ ಸಮೀಪದ ಯರಗೇರಾದಲ್ಲಿ ರೈತರಿಗೆ ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಭಜಂತ್ರಿ ಬುಧವಾರ ಬಿತ್ತನೆ ಬೀಜ ವಿತರಿಸಿದರು.
Published on

ಹನುಮಸಾಗರ: ಬಿತ್ತನೆ ಬೀಜ ಖರೀದಿಗೆ ಬರುವ ರೈತರು ಕಡ್ಡಾಯವಾಡಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ಸಹಾಯಕ ಕೃಷಿ ಅಧಿಕಾರಿ ವೀರೇಶ ಅಂತೂರ ಹೇಳಿದರು.

ಸಮೀಪದ ಯರಗೇರಾದಲ್ಲಿ ಬುಧವಾರ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಂದು ಪರಸ್ಪರ ಅಂತರ ಕಾಯ್ದುಕೊಂಡು ನಿಲ್ಲಬೇಕು. ಗ್ರಾಮದ ಬೀಜ ವಿತರಣಾ ಕೇಂದ್ರದಲಿ 3800 ಕೆಜಿ ಮೆಕ್ಕೆಜೋಳ, 540 ಕೆಜಿ ಸಜ್ಜೆ, 300 ಕೆಜಿ ಸೂರ್ಯಕಾಂತಿ ಬೀಜ ಇದೆ. ರೈತರ ಅಗತ್ಯಕ್ಕೆ ಅನುಸಾರ ಬಿತ್ತನೆ ಬೀಜ ತರಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಭಜಂತ್ರಿ, ಗ್ರಾಪಂ ಸದಸ್ಯರಾದ ಬಸವರಾಜ ಶೆಟ್ಟರ್, ಹನುಮಂತ ಈಳಗೇರ, ಬಸವರಾಜ ಗಡಾದ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ನಾಗರಾಜ ಶಿವನಗುತ್ತಿ, ಮುತ್ತು ಸೂಡಿ, ಶರಣಪ್ಪ ಕಾಟಾಪೂರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net