ರೆಣುಕಾ ಯಲ್ಲಮ್ಮದೇವಿ ಭಾವಚಿತ್ರ ಮೆರವಣಿಗೆ

portrait procession
ಹನುಮಸಾಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ರೆಣುಕಾ ಯಲ್ಲಮ್ಮದೇವಿ ಭಾವಚಿತ್ರ ಮೆರವಣಿಗೆ ಜರುಗಿತು.
Published on

ಹನುಮಸಾಗರ: ಪಟ್ಟಣದಲ್ಲಿ ಗುರುವಾರ ರೇಣುಕಾ ಯಲ್ಲಮ್ಮ ದೇವಿ ಭಾವಚಿತ್ರ ಹಾಗೂ ಕಳಸ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಪಾರಮ್ಮ ನಾಗೂರ ಅವರ ಮನೆಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ರೇಣುಕಾ ಯಲ್ಲಮ್ಮದೇವಿ ಗೆಳೆಯರ ಬಳಗದ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸಕಲ ವಾದ್ಯ ವೈಭವಗಳೊಂದಿಗೆ ನಡೆದ ಮೆರವಣಿಗೆ ಶ್ರೀ ಬನಶಂಕರಿ ದೇವಸ್ಥಾನ, ಜಗದಂಬಾ ದೇವಸ್ಥಾನ, ಜಹಗೀರದಾರ ಓಣಿ, ರಾಘವೇಂದ್ರಸ್ವಾಮಿ ಮಠ, ಕರಿಸಿದ್ದೇಶ್ವರ ಮಠದ ಮಾರ್ಗವಾಗಿ ಸಂಚರಿಸಿ ಮೊಟಿಗೇರ ಓಣಿಯಲ್ಲಿ ಇರುವ ದೇವಸ್ಥಾನ ತಲುಪಿತು. ನಂತರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net