ಪುರಾಣ ಆಲಿಕೆಯಿಂದ ಮಕ್ಕಳಲ್ಲಿ ಸಂಸ್ಕಾರ- ಹಾಲುಮತ ಸಮುದಾಯದ ಸಕ್ರಪ್ಪ ಬಿಂಗಿ ಅಭಿಮತ

090223 Hanumasagara Beeraligeshwara Jatre
ಹನುಮಸಾಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಮಹಿಮಾಂತಕ ಹುಲಜಂತಿ ಮಾಳಿಂಗರಾಯರ ಪುರಾಣಕ್ಕೆ ಮುಖಂಡ ಚನ್ನಬಸಪ್ಪ ಹಕ್ಕಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
Published on

ಹನುಮಸಾಗರ: ಪುರಾಣ, ಪ್ರವಚನ ಆಲಿಸುವುದರಿಂದ ಮನುಷ್ಯನಲ್ಲಿ ಸದ್ಗುಣಗಳು ಬರುತ್ತವೆ ಎಂದು ಹಾಲುಮತ ಸಮುದಾಯದ ಗೌರವಾಧ್ಯಕ್ಷ ಸಕ್ರಪ್ಪ ಬಿಂಗಿ ಹೇಳಿದರು. ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ 5ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶ್ರೀಮಹಿಮಾಂತಕ ಹುಲಜಂತಿ ಮಾಳಿಂಗರಾಯರ ಪುರಾಣ ಪ್ರಾರಂಭೋತ್ಸವದಲ್ಲಿ ಮಾತನಾಡಿದರು. ಪುರಾಣ ಪ್ರವಚನಗಳು ಮಕ್ಕಳಿಗೆ ಸಂಸ್ಕಾರ ಕಲಿಸುತ್ತವೆ. ಭಕ್ತಿಯಿಂದ ಪ್ರತಿಯೊಬ್ಬರು ಪುರಾಣ ಕೇಳಬೇಕು ಎಂದು ಹೇಳಿದರು.

ಜಾತ್ರಾಮಹೋತ್ಸವ ಯಶಸ್ವಿಯಾಗಿ ಜರುಗಲು ಎಲ್ಲರ ಸಹಕಾರ ಅಗತ್ಯ. ಜಾತ್ರೆ ನಿಮಿತ್ತ ಫೆ.18ರಂದು ಸಾಮೂಹಿಕ ವಿವಾಹ, 19ಕ್ಕೆ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ, 20ರಂದು ಜಂಗಿ ಕುಸ್ತಿ ಆಯೋಜಿಸಲಾಗಿದೆ ಎಂದರು.

ಶಿಕ್ಷಕ ಚಂದಪ್ಪ ಹಕ್ಕಿ ಮಾತನಾಡಿದರು. ಕೊರಡಕೇರಾ ಸಿದ್ದಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಚನ್ನಬಸಪ್ಪ ಹಕ್ಕಿ, ಹಾಲುಮತ ಸಮುದಾಯದ ಅಧ್ಯಕ್ಷ ಭರಮಪ್ಪ ಬಿಂಗಿ, ಕನಕದಾಸ ಬ್ಯಾಂಕ್ ಅಧ್ಯಕ್ಷ ಹನಮಂತಪ್ಪ ಬಿಂಗಿ, ಗ್ರಾಪಂ ಸದಸ್ಯರಾದ ಬಸವರಾಜ ಬಿಲ್ಕಾರ, ಬಸವರಾಜ ಅಕ್ಕಿ, ಲಕ್ಷ್ಮೀದೇವಿ ತಿಮ್ಮನಗೌಡ ಪೊಲೀಸ್‌ಪಾಟೀಲ್, ರೇಣವ್ವ ಪರಸಪ್ಪ ಕುಂಬಳಾವತಿ, ಹನುಮವ್ವ ಶಿವಪ್ಪ ಕಂದಗಲ್, ನೀಲವ್ವ ಹನುಮಂತಪ್ಪ ಹಕ್ಕಿ, ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತ್ರಿ, ಗವಾಯಿಗಳಾದ ಮಹೇಶ ಬಂಟನೂರ, ತಬಲಾವಾದಕ ಬಸವರಾಜ ಬಿಲ್ಲಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net