ಪ್ರೀತಿಯ ಬಾಳುವೆ ಪೈಗಂಬರ್ ಆಶಯ

PRAVADI MOHAMAD
ಹನುಮಸಾಗರದ ಮದೀನಾ ಜಾಮಿಯಾ ಮಸಜಿದ್‌ನಲ್ಲಿ ಶುಕ್ರವಾರ ಸಿರತ್ ಅಭಿಯಾನ ನಿಮಿತ್ತ ಮಹಾನ್ ಚಾರಿತ್ರ್ಯವಂತ ಪ್ರವಾದಿ ಮಹಮ್ಮದ್ ಪುಸ್ತಕ ಬಿಡುಗಡೆ ಮಾಡಲಾಯಿತು. ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಗೇಸುದರಾಜ ಮೂಲಿಮನಿ, ತಂಜೀಮ್ ಇಸ್ಲಾಮ್ ಕಮಿಟಿ ಅಧ್ಯಕ್ಷ ನಜೀರಸಾಬ ಮೆಣೇದಾಳ, ಹಅಕೋಬ್ಯಾಂಕಿನ ಮಾಜಿ ಉಪಾಧ್ಯಕ್ಷ ಅಂದಾನಯ್ಯಸ್ವಾಮಿ ಸೊಪ್ಪಿಮಠ, ಮುಖಂಡರಾದ ಮೈಬೂಬಸಾಬ ಮೂಲಿಮನಿ, ಅಬ್ದುಲ್‌ರಜಾಕ್ ಮೂಲಿಮನಿ, ಖಲೀಲ್ ಅಹ್ಮದ್ ಚೌದರಿ, ಅಹ್ಮದ್‌ಸಾಬ ಚೌದರಿ ಇತರರಿದ್ದರು.
Published on

ನುಮಸಾಗರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಜಮಾತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಗೇಸುದರಾಜ ಮೂಲಿಮನಿ ಹೇಳಿದರು.

ಪಟ್ಟಣದ ಮದೀನಾ ಜಾಮಿಯಾ ಮಸಜಿದ್‌ನಲ್ಲಿ ಶುಕ್ರವಾರ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ರಾಜ್ಯ ಮಟ್ಟದ ಸಿರತ್ ಅಭಿಯಾನ ನಿಮಿತ್ತ ಹಮ್ಮಿಕೊಂಡಿದ್ದ ಮಹಾನ್ ಚಾರಿತ್ರ್ಯವಂತ ಪ್ರವಾದಿ ಮಹಮ್ಮದ್ ಪುಸ್ತಕ ಬಿಡುಗಡೆ ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಪ್ರತಿಯೊಬ್ಬರ ಚಾರಿತ್ರ್ಯ ಒಳೆಯದಾಗಿರಬೇಕು ಎಂದು ಹೇಳುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಎಲ್ಲರೂ ಪ್ರೀತಿಯಿಂದ ಬಾಳಬೇಕು ಎಂಬುವುದು ಅವರ ಆಶಯವಾಗಿತ್ತು. ಬಡವರು, ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದ ಅವರು, ನಾವೆಲ್ಲರೂ ಒಂದು ಎಂಬ ಭಾವನೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯವ್ಯಾಪಿ ಸೆ.13 ರಿಂದ ಸೆ.22ರವರೆಗೆ ಸಿರತ್ ಅಭಿಯಾನ ನಿಮಿತ್ತ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ತಂಜೀಮ್ ಇಸ್ಲಾಮ್ ಕಮಿಟಿ ಅಧ್ಯಕ್ಷ ನಜೀರಸಾಬ ಮೆಣೇದಾಳ, ಹಅಕೋಬ್ಯಾಂಕಿನ ಮಾಜಿ ಉಪಾಧ್ಯಕ್ಷ ಅಂದಾನಯ್ಯ ಸ್ವಾಮಿ ಸೊಪ್ಪಿಮಠ, ಮುಖಂಡರಾದ ಮೈಬೂಬಸಾಬ ಮೂಲಿಮನಿ, ಅಬ್ದುಲ್‌ರಜಾಕ್ ಮೂಲಿಮನಿ, ಖಲೀಲ್ ಅಹ್ಮದ್ ಚೌದರಿ, ಅಹ್ಮದ್‌ಸಾಬ್ ಚೌದರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net