ಕ್ರೀಡಾಕೂಟದಲ್ಲಿ ಹನುಮಸಾಗರ ಕಸ್ತೂರಬಾ ಶಾಲೆ ವಿದ್ಯಾರ್ಥಿಗಳ ಸಾಧನೆ

31072022 Hanumasagar sports
Published on

ಹನುಮಸಾಗರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆದ ಗ್ರಾಪಂ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಗುಂಪು ಆಟ ಕಬಡ್ಡಿ ಮತ್ತು ರಿಲೇಯಲ್ಲಿ (ಪ್ರಥಮ), ಗುಂಡು ಎಸೆತ, 200 ಮೀ. ಓಟದಲ್ಲಿ ಸುಕ್ಷಿತಾ ಸಂಗಪ್ಪ ಪೂಜಾರಿ(ಪ್ರಥಮ), 800 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾಶ್ರೀ ರೊಟ್ಟಿ 200 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 400 ಮೀ. ಓಟದಲ್ಲಿ ಅಕ್ಷತಾ ಚಂದಪ್ಪ ವಡ್ಡರ (ದ್ವಿತೀಯ), 600 ಮೀ. ಓಟ, ಎತ್ತರ ಜಿಗಿತದಲ್ಲಿ ಐಶ್ವರ್ಯ ಕೊಣ್ಣೂರಮಠ ಕ್ರಮವಾಗಿ ದ್ವಿತೀಯ-ತೃತೀಯ ಸ್ಥಾನ ಪೆಡದುಕೊಂಡಿದ್ದಾರೆ. ಎತ್ತರ ಹಾಗೂ ಉದ್ದ ಜಿಗಿತದಲ್ಲಿ ಸವಿತಾ ಅಕ್ಕೇರಿ ಕ್ರಮವಾಗಿ ಮೊದಲ ಹಾಗೂ ಮೂರನೇ ಸ್ಥಾನ ಪಡೆದಿದ್ದರೆ, ಗುಂಡು ಎಸೆತದಲ್ಲಿ ಸುಕ್ಷಿತಾ ಪೂಜಾರಿ (ಪ್ರಥಮ), ಚಕ್ರ ಎಸೆತದಲ್ಲಿ ಶಶಿಕಲಾ ಕುಂಬಾರ(ತೃತೀಯ) ಸ್ಥಾನ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net