ಹನುಮಸಾಗರದಲ್ಲಿ ಕ್ರೀಡಾಕೂಟ ವ್ಯವಸ್ಥಿತವಾಗಿ ಆಯೋಜಿಸಿ

Hanumasagara school sports meeting
ಹನುಮಸಾಗರದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಸಿಆರ್‌ಸಿ ಲೆಂಕೆಪ್ಪ ವಾಲಿಕಾರ ಮಾತನಾಡಿದರು. ಮುಖ್ಯಶಿಕ್ಷಕರಾದ ಬಸಪ್ಪ ಬಂಡಿವಡ್ಡರ, ಬಸವರಾಜ ವಡ್ಡರ, ಚಂದಪ್ಪ ಹಕ್ಕಿ, ಭಾರತಿ ದೇಸಾಯಿ, ಮೈಬೂಬಸಾಬ, ದೈಹಿಕ ಶಿಕ್ಷಕರಾದ ಗೌರಮ್ಮ ತಳವಾರ, ಶಕುಂತಲಾ ಚಿನಿವಾಲರ, ಶಿವಲೀಲಾ ಇತರರಿದ್ದರು.
Published on

ಹನುಮಸಾಗರ: ಪ್ರಾಥಮಿಕ ಶಾಲೆಗಳ ಗ್ರಾಪಂ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೌಕರ್ಯಗಳು ಸಮಸ್ಯೆಯಾಗದಿರಲಿ ಎಂದು ಸಿಆರ್‌ಸಿ ಲೆಂಕೆಪ್ಪ ವಾಲಿಕಾರ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ಮಟ್ಟದ ಕ್ರೀಡಾಕೂಟಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹನುಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ 12 ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇಂದಿರಾಗಾಂಧಿ ವಸತಿ ಶಾಲೆ ಆವರಣದಲ್ಲಿ ಕ್ರೀಡಾಕೂಟಗಳು ಜುಲೈ ತಿಂಗಳಿನಲ್ಲಿ ನಡೆಯಲಿವೆ.

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಆಹ್ವಾನ ನೀಡಬೇಕು. ದೈಹಿಕ ಶಿಕ್ಷಕರಿಗೆ ಕ್ರೀಡಾಕೂಟಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಯಶಾಲಿಯಾದ ಶಾಲೆಯ ವಿದ್ಯಾರ್ಥಿಗಳು ನಂತರ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯಶಿಕ್ಷಕರಾದ ಬಸಪ್ಪ ಬಂಡಿವಡ್ಡರ, ಬಸವರಾಜ ವಡ್ಡರ, ಚಂದಪ್ಪ ಹಕ್ಕಿ, ಭಾರತಿ ದೇಸಾಯಿ, ಮೈಬೂಬಸಾಬ, ದೈಹಿಕ ಶಿಕ್ಷಕರಾದ ಈರಣ್ಣ ಅಂಗಡಿ, ಶಿವಪ್ಪ ಕಮ್ಮಾರ, ತಿಪ್ಪಣ್ಣ ಪಾಲಕಾರ, ಹೂವಪ್ಪ, ಸುಧಾ ಗೌಡರ, ಗಂಗಮ್ಮ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net