ಹಿರೇಗೊಣ್ಣಾಗರ ಪಿಎಚ್‌ಸಿಗೆ ವೈದರನ್ನು ನೇಮಿಸಿ

Protest
ಹನುಮಸಾಗರ ಸಮೀಪದ ಹಿರೇಗೊಣ್ಣಾಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಅಮೀನಸಾಬ ನದಾಪ್, ಹನುಮಂತ ಸಂಗಣ್ಣನವರ, ನಜೀರಸಾಬ ನದಾಪ್, ಖಾಸಿಂಸಾಬ ನದಾಪ್, ಮೌನೇಶ ಜೋಗಿನ, ರಹೇಮಾನಸಾಬ ಮ್ಯಾಗಲಮನಿ, ಮನೋಹರ ಕುಂಟೋಜಿ ಇತರರಿದ್ದರು.
Published on

ಹನುಮಸಾಗರ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ಹಾಗೂ ತಜ್ಞ ವೈದ್ಯರನ್ನು ನೇಮಿಸಲು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಸಮೀಪದ ಹಿರೇಗೊಣ್ಣಾಗರ ಆಸ್ಪತ್ರೆ ಮುಂಭಾಗ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕಳೆದ ಆರೇಳು ತಿಂಗಳಿಂದ ಹಿರೇಗೊಣ್ಣಾಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು ಇಲ್ಲ. ತಜ್ಞ ವೈದ್ಯರಂತು ಮೊದಲೇ ಇಲ್ಲ. ವಾರದಲ್ಲಿ ಮಂಗಳವಾರ, ಶುಕ್ರವಾರ ಮಾತ್ರ ಬೇರೆ ಕಡೆಯಿಂದ ಡಾಕ್ಟರ್ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆರೋಗ್ಯ ತಪಾಸಣೆಗೆ ಖಾಸಗಿ ವೈದ್ಯರ ಮೊರೆ ಹೋಗಬೇಕಾಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ಡಾಕ್ಟರ್ ಇಲ್ಲ ಎನ್ನುತ್ತಾರೆ. ಇದರಿಂದಾಗಿ ರೋಗಿಗಳು ತುಂಬಾ ಸಮಸ್ಯೆ ಎದುರಿಸಬೇಕಾಗಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರೋಗಿಗಳ ಗಜೇಂದ್ರಗಡ, ಬಾದಾಮಿ, ಕುಷ್ಟಗಿ ಇಳಕಲ್ ಪಟ್ಟಣಕ್ಕೆ ಹೋಗಬೇಕಾಗಿದೆ. ಈ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಸಹ ಇಲ್ಲ. ಗ್ರಾಮೀಣ ಜನರು ಇರುವುದರಿಂದ ಕುಟುಂಬದ ಸದಸ್ಯರನ್ನು ಉಳಿಸಿಕೊಳ್ಳಲು ಸಾವಿರಾರು ಹಣ ಖರ್ಚು ಮಾಡಿಕೊಂಡು ಬಾಡಿಗೆ ವಾಹನವನ್ನು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರಮುಖರಾದ ಅಮೀನಸಾಬ ನದಾಪ್, ಹನುಮಂತ ಸಂಗಣ್ಣನವರ, ನಜೀರಸಾಬ ನದಾಪ್, ಖಾಸಿಂಸಾಬ ನದಾಪ್, ಮೌನೇಶ ಜೋಗಿನ, ರಹೇಮಾನಸಾಬ ಮ್ಯಾಗಲಮನಿ, ಮನೋಹರ ಕುಂಟೋಜಿ, ಯಲ್ಲಪ್ಪ ಮೆಣಸಗೇರಿ, ಅಮೀನಸಾಬ ಮುಗನೂರ, ಯಲ್ಲಪ್ಪ ಜೋಗಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net