ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ

31052020 Hanumasagar Gurji Pooje
Published on

ಹನುಮಸಾಗರ: ಮಳೆಗಾಗಿ ಪ್ರಾರ್ಥಿಸಿ ತುಮರಿಕೊಪ್ಪ ಗ್ರಾಮದಲ್ಲಿ ಭಾನುವಾರ ಗುರ್ಜಿ ಪೂಜೆ ನಡೆಯಿತು.
ಗುರ್ಜಿ ಹೊತ್ತುಕೊಂಡು ಯುವಕರು, ‘ಗುರ್ಜಿ ಗೊರಜಿ ಎಲ್ಲಾಡಿ ಬಂದೆ ಹಳ್ಳ-ಕೊಳ್ಳ ತೇಲಾಡಿ ಬಂದೆ, ಸುಣ್ಣ ಕೊಡತೀನಿ ಸುರಿಯೋ ಮಳೆಯೇ ಬಣ್ಣ ಕೋಡತಿನಿ ಬಾರೋ ಮಳೆಯೇ..’ ಎಂದು ಹಾಡುತ್ತ ಮನೆ ಮನೆಗೆ ತೆರಳಿದರು. ಜನರಿಂದ ನೀರು ಹಾಕಿಸಿಕೊಳ್ಳುತ್ತ ಪ್ರದಕ್ಷಿಣೆ ಹಾಕಿ ದವಸ-ಧಾನ್ಯ ಸಂಗ್ರಹಿಸಿದರು. ಇದೇ ವೇಳ ಗ್ರಾಮದ ಬಸವಣ್ಣನ ಮೂರ್ತಿಗೂ ಪೂಜೆ ಸಲ್ಲಿಸಿದರು.

ಮಹಾಂತೇಶ ತುಗಲಡೋಣಿ ಗುರ್ಜಿ ಹೊತ್ತಿದ್ದರು. ಗ್ರಾಮಸ್ಥರಾದ ಗದ್ದೆಪ್ಪ ಗ್ವಾತಗಿ, ಹನುಮಂತ ಲಂಡೂರಿ, ಕಳಕಪ್ಪ ಪರಸಾಪುರ, ಯಮನಪ್ಪ ನಸಗುನ್ನಿ, ಶರಣಪ್ಪ ಗುಡೂರು, ಯಲ್ಲಪ್ಪ ಮಾದರ, ಶರಣಪ್ಪ ಗುಳಬಾಳ, ಹನಮಪ್ಪ ಚಿಕನಾಳ, ನೂರಂದಪ್ಪ ಗ್ವಾತಗಿ, ಮರಿಯಪ್ಪ ನಸಗುನ್ನಿ, ಯಮನಪ್ಪ ಶ. ಗ್ವಾತಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net