

ಹನುಮಸಾಗರ: ಪಟ್ಟಣದ ಕೆಪಿಎಸ್ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತಿಪ್ಪಣ್ಣ ಪಾಲಕಾರ, ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.5 ಮತ್ತು 6 ರಂದು ನಡೆದ ಕ್ರೀಡಾಕೂಟದಲ್ಲಿ ತಿಪ್ಪಣ್ಣ ಪಾಲಕಾರ ವೈಯಕ್ತಿಕ ವಿಭಾಗದಲ್ಲಿ 800 ಮೀ., 1500 ಮೀ., 5 ಸಾವಿರ ಮೀ. ಓಟದಲ್ಲಿ ಪ್ರಥಮ ಸ್ಥಾನ. ಗುಂಪು ಆಟಗಳಲ್ಲಿ ಇವರು ಪ್ರತಿನಿಧಿಸಿದ್ದ 4*100 ಮೀ. ರಿಲೇ (ಪ್ರಥಮ), ಬಾಲ್ ಬ್ಯಾಡ್ಮಿಂಟನ್ (ಪ್ರಥಮ) ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನೂ ಖೋಖೋ, 4*400 ಮೀ. ರಿಲೇಯಲ್ಲಿ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ