

ಹನುಮಸಾಗರ: ಪಂಡಿತ್ ಪುಟ್ಟರಾಜ ಗವಾಯಿಗಳು ಸಂಗೀತದ ಮೂಲಕ ಅನೇಕ ಅಂಧರ ಬಾಳಿಗೆ ನಂದಾದೀಪವಾಗಿದ್ದಾರೆ ಎಂದು ನಿಸರ್ಗ ಸಂಗೀತ ಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.
ಪಟ್ಟಣದ ನಿಸರ್ಗ ಸಂಗೀತ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಡಿತ್ ಪುಟ್ಟರಾಜ ಗವಾಯಿಗಳ 111ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡು ನುಡಿಗೆ ಪುಟ್ಟರಾಜರ ಕೊಡುಗೆ ಅಪಾರ. ಸಂಗೀತ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ನೀಡಿದ್ದಾರೆ. ಅಂಧ ಹಾಗೂ ಅನಾಥರಿಗೆ ವಸತಿ ಜತೆ ಸಂಗೀತದಿಂದ ಬದುಕು ಕಟ್ಟಿಕೊಟ್ಟಿದ್ದಾರೆ. ಪುಟ್ಟರಾಜರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅನೇಕ ಕಲಾವಿದರು ಪುಟ್ಟರಾಜರ ಸಹಕಾರದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪುಟ್ಟರಾಜರು ಸರ್ವಕಾಲಕ್ಕೂ ಪ್ರಸಿದ್ಧ ಎಂದರು.
ಎಎಸ್‌ಐ ಶಿವಕುಮಾರ ಹಿರೇಮಠ, ಪ್ರಮುಖರಾದ ಮಹಾಂತಯ್ಯ ಕೋಮಾರಿ, ಮುತ್ತಣ್ಣ ಸಂಗಮದ, ಶಂಕ್ರಪ್ಪ ಸಿನ್ನೂರ, ಈರಣ್ಣ ಹುನಗುಂಡಿ, ಏಕನಾಥ ಮೆದಿಕೇರಿ ಇತರರಿದ್ದರು.