ನಾಪತ್ತೆಯಾಗಿದ್ದ ಕುರಿಗಾಹಿ ಶವವಾಗಿ ಪತ್ತೆ

19102020 Hanumasagara Kurigahi
Published on

ಹನುಮಸಾಗರ: ಸಮೀಪದ ನಿಲೋಗಲ್ಲ ಗ್ರಾಮದಲ್ಲಿ 15 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಲಪ್ಪ ನೀಲಪ್ಪ ಬಾರಿಗಿಡದ (55) ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ.

ಮೃತ ಮಲ್ಲಪ್ಪ ಕಳೆದ 15 ದಿನಗಳ ಹಿಂದೆ ಕುರಿ ಮೇಯಿಸಲು ಹೋದವ ಮರಳಿ ಮನೆಗೆ ಬಂದಿರಲಿಲ್ಲ. ಸೋಮವಾರ ಕುರಿಗಾಹಿಗಳು ಕುರಿ ಮೇಯಿಸಲು ಹೋದಾಗ ಮೃತ ದೇಹ ಪತ್ತೆ ಆಗಿದೆ.

ಮೃತ ಮಲ್ಲಪ್ಪನ ದೇಹದ ಪಕ್ಕದಲ್ಲಿ ವಿಷದ ಬಾಟಲಿ ಬಿದ್ದಿದ್ದರಿಂದ ಆತ್ಮಹತ್ಯೆ ಮಾಡಿ ಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತರಿಗೆ ಆರೋಗ್ಯದಲ್ಲಿ ಸಮಸ್ಯೆಯಿದ್ದ ಕಾರಣ ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ತೆ ಮಾಡಿಕೊಂಡಿದ್ದಾರೆಂದು ಮೃತನ ಪತ್ನಿ ರೇಣವ್ವ ಬಾರಿಗಿಡದ ನೀಡಿದ ದೂರಿನ ಮೇರೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net