ನರೇಗಾದಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸಿ: ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚನೆ

Jagagiragudaduru ZP CEO Visit
ಜಹಗೀರಗುಡದೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಆಟದ ಮೈದಾನವನ್ನು ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಪರಿಶೀಲಿಸಿದರು.
Published on

ಹನುಮಸಾಗರ: ಗ್ರಾಪಂಗಳು ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.

ಜಹಗೀರಗುಡದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಸಂಜೆ ಭೇಟಿ ನೀಡಿ ನರೇಗಾ ಯೋಜನೆ ಕೈಗೊಂಡ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ಶಾಲೆಯ ಆವರಣದಲ್ಲಿ 10 ಲಕ್ಷ ರೂ. ವೆಚ್ಚದ ಆಟದ ಮೈದಾನ, 12.25 ಲಕ್ಷ ರೂ. ವೆಚ್ಚದ ಭೋಜನಾಲಯ, 4.50 ಲಕ್ಷ ರೂ. ವೆಚ್ಚದ ಶೌಚಗೃಹ, 2.50 ಲಕ್ಷ ರೂ. ವೆಚ್ಚದ ಮಳೆ ನೀರು ಕೊಯ್ಲು ಸೇರಿ ವಿವಿಧ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಮಕ್ಕಳ ಕಲಿಕೆಗೆ ಬೇಕಾದ ಸೌಲಭ್ಯ ಒದಗಿಸಲು ಗ್ರಾಪಂನಿಂದ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.

ತಾಪಂ ಇಒ ಶಿವಪ್ಪ ಸುಬೇದಾರ್, ಗ್ರಾಪಂ ಅಧ್ಯಕ್ಷ ಕೆ.ಎಸ್.ಹನುಮಂತ, ಆರ್‌ಡಬ್ಲುೃಎಸ್ ಇಂಜಿನಿಯರ್ ಬಸನಗೌಡ, ಪಿಆರ್‌ಡಿಎ ನಾಗರಾಜ, ಯಾಸೀನ್, ವಿನಾಯಕ, ಗುರುರಾಜ್, ತಾಂತ್ರಿಕ ಸಂಯೋಜಕ ಬಸವರಾಜ, ಮುಖ್ಯಶಿಕ್ಷಕ ಸತ್ಯಪ್ಪ ಯಲಬುರ್ಗಾ, ಶಿಕ್ಷಕರಾದ ಗುರುರಾಜ ಎಲ್., ಜಗದೀಶ, ಎನ್‌ಆರ್‌ಎಲ್‌ಎಂ ಸಂಯೋಜಕ ಮಾದೇಗೌಡ ಪೊಲೀಸ್ ಪಾಟೀಲ್, ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಪಂ ಸದಸ್ಯ ಶರಣು ಮಾಲಗಿತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net