ದೇವರ ನಾಮಸ್ಮರಣೆಯಿಂದ ಮನಸಿಗೆ ನೆಮ್ಮದಿ- ವಿವೇಕಾನಂದ ಸ್ವಾಮೀಜಿ ಅಭಿಮತ

301121 Hanumasagara lalitha Sahashranama Parayana
ಹನುಮಸಾಗರದ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಲಲಿತಸಹಸ್ರನಾಮ ಪಾರಾಯಣ ಮಾಡಲಾಯಿತು.
Published on

ಹನುಮಸಾಗರ: ದೇವರ ನಾಮಸ್ಮರಣೆ ಮಾಡುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ ಎಂದು ದೇವಾಂಗ ಸಮುದಾಯದ ಗುರುಗಳಾದ ಶ್ರೀ ವಿವೇಕಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇಂದಿನ ಕಂಪ್ಯೂಟರ್ ಯುಗದಲ್ಲಿ ಕೆಲಸಗಳ ಒತ್ತಡದಿಂದಾಗಿ ದೈಹಿಕ ಹಾಗೂ ಮಾನಸಿಕ ಬಳಲಿಕೆ ಸಹಜವಾಗಿದೆ. ಲಲಿತ ಸಹಸ್ರನಾಮ ಸೇರಿದಂತೆ ವಿವಿಧ ದೇವರ ನಾಮಸ್ತುತಿಗಳ ಪಾರಾಯಣ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗಲಿದೆ. ಇದರಿಂದ ಹೊಸ ಹೊಸ ಆಲೋಚನೆಗಳಿಗೆ ಸಹಾಯವಾಗಲಿದೆ ಎಂದರು.

ಪ್ರವಚನಕಾರ ಶಿವಶಂಕರ ಮೆದಿಕೇರಿ ಮಾತನಾಡಿ, ಪುರಾತನ ಕಾಲದಿಂದಲೂ ಲಲಿತಸಹಸ್ರನಾಮಕ್ಕೆ ಮಹತ್ವವಿದೆ. ಭಕ್ತಿಯಿಂದ ನಿಯಮ ಬದ್ಧವಾಗಿ ದೇವಿಯ ನಾಮಸ್ಮರಣೆ ಮಾಡಿದರೆ ಆಯುರಾರೋಗ್ಯ ಪ್ರಾಪ್ತಿ ಜತೆಗೆ ಇಷ್ಟಾರ್ಥಗಳು ಈಡೇರುತ್ತವೆ ಎಂದರು.

ದೇವಾಂಗ ಸಮುದಾಯದ ಸ್ಥಳೀಯ ಘಟಕದ ಅಧ್ಯಕ್ಷ ಅಶೋಕ ಸಿನ್ನೂರು, ಉಪಾಧ್ಯಕ್ಷ ಬಸವರಾಜ ಸಿನ್ನೂರು, ಮುಖಂಡರಾದ ವಿರೂಪಾಕ್ಷಪ್ಪ ಧುತ್ತುರಗಿ, ಶಂಕ್ರಪ್ಪ ಸಪ್ಪಂಡಿ, ವೀರಪ್ಪ ಸಿನ್ನೂರು, ಶಂಕ್ರಪ್ಪ ಸಿನ್ನೂರು, ಶ್ರೀನಿವಾಸ ಸಿನ್ನೂರು, ರಾಮನಗೌಡ ಸಿನ್ನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net