ಆರೋಗ್ಯದಲ್ಲಿ ಸಮಸ್ಯೆ ಇದ್ದಲ್ಲಿ ನಿರ್ಲಕ್ಷೃ ಬೇಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸಲಹೆ

labor union inauguration
ತಳುವಗೇರಾ ಗ್ರಾಮದಲ್ಲಿ ಆಯೋಜಿಸಿದ್ದ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಡಿಬಿಒಟಿ ಆಧಾರಿತ ಬಹು ಗ್ರಾಮ ಕುಡಿವ ನೀರಿನ ಯೋಜನೆಯ ಕಾರ್ಮಿಕರ ಸಂಘ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಪ್ರಮುಖರಾದ ಚಂದ್ರು ವಡಗೇರಿ, ಶೇಖರ ಹೊರಪೇಟಿ, ಬಸವರಾಜ ಮಾಲಿಗೌಡರ, ಯಮನೂರ ಮನ್ನೆರಾಳ, ಶರಣಪ್ಪ ರೂಡಗಿ, ದೊಡ್ಡಪ್ಪ ಕೌದಿ, ದುರುಗೇಶ ಇತರರಿದ್ದರು.
Published on

ಹನುಮಸಾಗರ: ಕಾರ್ಮಿಕರು ತಮ್ಮ ಕೆಲಸದ ಜತೆಗೆ ಆರೋಗ್ಯ ಕಡೆಗೆ ಗಮನ ಹರಿಸಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಸಮೀಪದ ತಳುವಗೇರಾ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಡಿಬಿಒಟಿ ಆಧಾರಿತ ಬಹು ಗ್ರಾಮ ಕುಡಿವ ನೀರಿನ ಯೋಜನೆಯ ಕಾರ್ಮಿಕರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಆರೋಗ್ಯ ಸರಿ ಇದ್ದರೆ ಮಾತ್ರ ಕೆಲಸ ಮಾಡಲು ಸಾಧ್ಯ. ಕಾರ್ಮಿಕರು ಕೆಲಸದ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಬಿಸಿಲಿನಲ್ಲಿ ಕೆಲಸ ಮಾಡುವಾಗ ತಲೆಗೆ ಟೋಪಿ ಅಥವಾ ಟವಲ್ ಹಾಕಿಕೊಳ್ಳಬೇಕು. ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ನಿರ್ಲಕ್ಷೃ ಮಾಡದೇ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ದುಶ್ಚಟಗಳಿಗೆ ದಾಸರಾಗಿ ಹಣ, ಆರೋಗ್ಯ ಹಾಳು ಮಾಡುವ ಬದಲು ಶುಚಿ-ರುಚಿ ಆಹಾರ ಸೇವಿಸಬೇಕೆಂದರು.

ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಪ್ರಮುಖರಾದ ಚಂದ್ರು ವಡಗೇರಿ, ಶೇಖರ ಹೊರಪೇಟಿ, ಬಸವರಾಜ ಮಾಲಿಗೌಡರ, ಯಮನೂರ ಮನ್ನೆರಾಳ, ಶರಣಪ್ಪ ರೂಡಗಿ, ದೊಡ್ಡಪ್ಪ ಕೌದಿ, ದುರುಗೇಶ ಮಾದರ, ಸಂಘದ ಅಧ್ಯಕ್ಷ ಮಾರುತೇಶ ದೊಡ್ಡಮನಿ, ಉಪಾಧ್ಯಕ್ಷ ರವಿ ಜಾಲಹಳ್ಳಿ, ಕಾರ್ಯದರ್ಶಿ ಮಹೇಶ ಗೌಡ, ಗೌರವಾಧ್ಯಕ್ಷ ಅಂಬರೀಶ ಪಾಲಕರ, ಖಜಾಂಜಿ ಶರಣಪ್ಪ ಗೌಡ್ರ, ಸದಸ್ಯರಾದ ಶಿವಪ್ಪ ಬಂಡಿ, ಪ್ರಭು ವಸ್ತ್ರದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net