ಸಮುದಾಯ ಭವನ ಸದ್ಬಳಕೆಯಾಗಲಿ

06012020 Hanumasaga Amaregouda Bayyapur
Published on

ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸಲಹೆ

ಹನುಮಸಾಗರ: ಸಮುದಾಯ ಭವನವನ್ನು ಗ್ರಾಮದ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸಲಹೆ ನೀಡಿದರು.

ಸಮೀಪದ ವೆಂಕಟಾಪುರ ಗ್ರಾಮದಲ್ಲಿ ಸೋಮವಾರ ಶ್ರೀ ಸೇವಾಲಾಲ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 20 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಸಮುದಾಯ ಭವನ ಅನಗತ್ಯ ಚಟುವಟಿಕೆಗಳಿಗೆ ಬಳಕೆಯಾಗಬಾರದು. ಹಾಗಾದರೆ ಮಾತ್ರ ಅರ್ಥ ಬರುತ್ತದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಗುತ್ತಿಗೆದಾರರಿಗೆ ಸಹಕಾರ ನೀಡಿ, ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಹನುಮವ್ವ ಮರಿಯಪ್ಪ, ಮುಖಂಡ ಸೋಮಶೇಖರ ವೈಜಾಪುರ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಪೊಲೀಸ್‌ಪಾಟೀಲ್, ಸದಸ್ಯರಾದ ಲಲೀತಾ ನಾಯಕ, ಮೋತಿಲಾಲ ಉ. ಪೂಜಾರ, ಗುತ್ತಿಗೇದಾರ ನೀಲಪ್ಪ ಎನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net