ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಭೇಟಿ

01082020 Hanumasagar MLA visit to Forest
Published on

ಮಳೆ ನೀರಿನಿಂದ ಕೆರೆ ತುಂಬಿಸಲು ಸೂಚನೆ

ಹನುಮಸಾಗರ: ಅಚನೂರ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಶುಕ್ರವಾರ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಜಿಲ್ಲಾ ಅರಣ್ಯಾಧಿಕಾರಿ ಹರ್ಷ ಬಾನು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಶಾಸಕ, ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಅಚನೂರು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಈ ಗುಡ್ಡ, ತಾಲೂಕಿನ ಗಡಿ ಭಾಗದಲ್ಲಿದ್ದು, ಮಳೆ ನೀರು ಬೇರೆಡೆ ಹರಿಯುತ್ತಿದೆ. ಈ ನೀರು ನಮ್ಮ ತಾಲೂಕಿನ ಹಳ್ಳಿಗಳ ಕೆರೆಗಳಿಗೆ ಸೇರಿಸಿದರೆ ರೈತರಿಗೆ ಅನೂಕಲವಾಗುತ್ತದೆ. ಅದಕ್ಕಾಗಿ ಭೇಟಿ ನೀಡಲಾಗಿದೆ. ನೀರು ಬೇರೆಡೆ ಹೋಗದಂತೆ ಒಡ್ಡು ನಿರ್ಮಿಸಿ ದೇವಸ್ಥಾನದ ಬಳಿಯ ಕೆರೆಗೆ ಸೇರಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಅರಣ್ಯಾಧಿಕಾರಿ ಹರ್ಷ ಬಾನು, ತಾಲೂಕ ಅರಣ್ಯಾಧಿಕಾರಿ ಅನ್ವರಸಾಬ, ವಲಯ ಅರಣ್ಯಾಧಿಕಾರಿಗಳಾದ ಮಹ್ಮದ ರೀಯಾಜ್, ಚಿದಾನಂದ ಓಲೇಕಾರ, ಕಳಕಪ್ಪ ಬ್ಯಾಳಿ, ಮಲ್ಲಿಕಾರ್ಜುನ, ಸ್ಥಳೀಯರಾದ ಮಹಾಂತೇಶ ಶೆಟ್ಟರ, ಯಮನೂರಪ್ಪ ಗಾಜಿ, ರಾಮಣ್ಣ ಗುಜ್ಜಲ, ಮಲ್ಲಪ್ಪ ಕೋತಬಾಳ, ಉಮೇಶ ಹೂಗಾರ, ಕೃಷ್ಠಪ್ಪ ಭಂಡಾರಿ, ಮಲ್ಲಯ್ಯಜ್ಜ ಹಿರೇಮಠ, ಖಾಜಾಸಾಬ ಮುಲ್ಲಾಬಾಯಿ, ರಂಗಪ್ಪ ಮುಸರಕೋಡ, ಹನುಮಪ್ಪ ರಗಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net