ವಾಲ್ಮೀಕಿ ವಿಚಾರಧಾರೆಗಳು ವಿಶ್ವಕ್ಕೆ ಮಾದರಿ

Hanumasaga valmiki jayanti
ಹನುಮಸಾಗರದ ಕುಂಬಳಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಅಶೋಕ ಮಾಲಿಪಾಟೀಲ್, ಮುಖಂಡರಾದ ರಾಮನಗೌಡ ಮಾಲಿಪಾಟೀಲ್, ಬಾಳಪ್ಪ ಶಾಖಾಪೂರ, ಪರಶುರಾಮ ಬೇಡರ, ದ್ಯಾಮಣ್ಣ ಬಡಿಗೇರ, ಹನುಮಂತ ಮುಂಡರಗಿ, ದ್ಯಾಮಣ್ಣ ಕೊಡಗಲಿ, ಮುತ್ತು ನರಸಾಪೂರ, ಮಲ್ಲಪ್ಪ ಗಾಣದಾಳ ಇತರರಿದ್ದರು.
Published on

ಹನುಮಸಾಗರ: ರಾಮಾಯಣದ ಒಳ್ಳೆಯ ಅಂಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಅಶೋಕ ಮಾಲಿಪಾಟೀಲ್ ಹೇಳಿದರು.

ಸಮೀಪದ ಕುಂಬಳಾವತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ವಾಲ್ಮೀಕಿ ರಾಮಾಯಣದ ಮೂಲಕ ಜಗತ್ತಿಗೆ ಶ್ರೀ ರಾಮಚಂದ್ರನನ್ನು ಪರಿಚಯಿಸಿದ್ದಾರೆ. ಅಣ್ಣ ತಮ್ಮಂದಿರು ಹೇಗಿರಬೇಕೆಂದು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಿಂದ ಕಲಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂಪೂರ್ಣವಾಗಿ ರಾಮಾಯಣ ಓದಿ ಅರ್ಥೈಸಿಕೊಳ್ಳಬೇಕು. ಮಹರ್ಷಿ ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಮಾದರಿ ಎಂದರು.

ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಕುಂಭ, ಕಳಸ ಹಾಗೂ ಜನಪದ ವಾದ್ಯಗಳು ಗಮನಸೆಳೆದವು. ಮುಖಂಡರಾದ ರಾಮನಗೌಡ ಮಾಲಿಪಾಟೀಲ್, ಬಾಳಪ್ಪ ಶಾಖಾಪೂರ, ಪರಶುರಾಮ ಬೇಡರ, ದ್ಯಾಮಣ್ಣ ಬಡಿಗೇರ, ಹನುಮಂತ ಮುಂಡರಗಿ, ದ್ಯಾಮಣ್ಣ ಕೊಡಗಲಿ, ಮುತ್ತು ನರಸಾಪೂರ, ಮಲ್ಲಪ್ಪ ಗಾಣದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net