ಮದ್ನಾಳ ಗ್ರಾಮಸ್ಥರಿಂದ ಬಸ್‌ಗೆ ಪೂಜೆ

05102021 Hanumasagar New rote bus
Published on


ಹನುಮಸಾಗರ: ಮದ್ನಾಳ-ಯರಗೇರಾ ಗ್ರಾಮಕ್ಕೆ ಸೋಮವಾರ ಕುಷ್ಟಗಿಯಿಂದ ಹನುಮನಾಳಗೆ ಹೋಗುವ ಬಸ್ ಬಿಟ್ಟಿದ್ದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

ಕುಷ್ಟಗಿಯಿಂದ ಹನುಮನಾಳಗೆ ಮಧ್ಯಾಹ್ನ ಹೋಗುವ ಬಸ್ಸನ್ನು ಈ ಎರಡೂ ಗ್ರಾಮಕ್ಕೆ ಬಿಡುವಂತೆ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬರಲಾಗಿತ್ತು. ಇದೀಗ ಕಾರ್ಯರೂಪಕ್ಕೆ ಬಂದಿದೆ. ಈ ಬಸ್‌ನಿಂದ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸೋಮವಾರ ಗ್ರಾಮಕ್ಕೆ ಬಸ್ ಬರುತ್ತಿದಂತೆ ಮದ್ನಾಳ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net