ಜೇನು ಬಿಡಿಸುತ್ತಿರುವ ಯುವಕರು

12042020 Hanumasaga honeycomb youth
Published on

ಹನುಮಸಾಗರ: ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಗ್ರಾಮೀಣ ಯುವಕರು ಮನೆಯಲ್ಲಿ ಸುಮ್ಮನೆ ಕೂಡಲಾಗದೇ ಜೇನು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬೇಸಿಗೆ ಬಂದರೆ ಸಾಕು ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನ ಮಹಾನಗರಗಳು, ಅನ್ಯರಾಜ್ಯಗಳಿಗೆ ಉದ್ಯೋಗ ಅರಸಿ ತೆರಳುತ್ತಿದ್ದರೆ. ಕರೊನಾದಿಂಧಾಗಿ ಈಗ ಆಗುತ್ತಿಲ್ಲ. ಇತ್ತ ಮನೆಯಲ್ಲೂ ಸುಮ್ಮನೆ ಕೂಡಲು ಆಗುತ್ತಿಲ್ಲ. ಹೀಗಾಗಿ, ಅಡವಿಗೆ ತೆರಳಿ ಜೇನು ಗೂಡು, ಪತ್ತೆ ಹಚ್ಚಿ, ತುಪ್ಪ ಬಿಡಿಸುತ್ತಿದ್ಧಾರೆ. ಸಮೀಪದ ತುಮರಿಕೊಪ್ಪ, ಗುಡ್ಡದ ದೇವಲಾಪುರ, ಹನುಮನಾಳ, ಗೋರೆಬಿಹಾಳ, ಮಾಸ್ತಕಟ್ಟಿ ಸೇರಿ ವಿವಿಧ ಗ್ರಾಮಗಳ ಯುಕವರು ಕಳೆದ ಎಡ್ಮೂರು ವಾರಗಳಿಂದ ಈ ಕೆಲಸಲ್ಲಿ ನಿರತರಾಗಿದ್ದಾರೆ. ನಿತ್ಯ 4 ರಿಂದ 10 ಯುವಕರು ಗುಂಪು ಸೇರಿ ಜೇನು ಗೂಡು ಹುಡುಕಿ, ತುಪ್ಪ ಬಿಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net