ನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ; ಯುವಕರಿಗೆ ಸಂಪನ್ಮೂಲ ವ್ಯಕ್ತಿ ಸುರೇಶ ಸಲಹೆ

15112021 Hanumasagar Library Saptaha
Published on

ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಹನುಮಸಾಗರ: ಪ್ರತಿಯೊಬ್ಬರೂ ನಿತ್ಯ ಗ್ರಂಥಾಲಯಗಳಿಗೆ ಹೋಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಸಂಪನ್ಮೂಲ ವ್ಯಕ್ತಿ ಸುರೇಶ ಪತ್ತಾರ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಷ್ಟಗಿ ತಾಲೂಕು ಮಟ್ಟದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಂಥಾಲಯಗಳಿಗೆ ಹೋಗಿ ಓದಲು ಸಮಯ ಮೀಸಲಿಡಿ. ನಿತ್ಯ ಓದುವುದರಿಂದ ನಮ್ಮಲ್ಲಿ ಜ್ಞಾನ ಭಂಡಾರ ವೃದ್ಧಿ ಜತೆಗೆ ಅಜ್ಞಾನ ದೂರವಾಗುತ್ತದೆ. ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡದೆ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net