ಫೆ.21ರಿಂದ ಕರಿಸಿದ್ಧೇಶ್ವರ ಜಾತ್ರೋತ್ಸವ

17 Hanumasagara 1
Published on

ಹನುಮಸಾಗರ: ಆರಾಧ್ಯ ದೈವ ಶ್ರೀ ಕರಿಸಿದ್ಧೇಶ್ವರ ಮಠದ ಜಾತ್ರೋತ್ಸವ ಫೆ.21ರಿಂದ ಮಾ.23ರವರೆಗೆ ಜರುಗಲಿದೆ ಎಂದು ಕುದರಿಮೋತಿಯ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಕರಿಸಿದ್ಧೇಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಒಂದು ತಿಂಗಳ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.21ರಿಂದ ತೆರೆದಾಳದ ಪ್ರವಚನಕಾರ ಶಿವಕುಮಾರ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಮಾ.21ರಂದು ಉಚ್ಚಾಯ ಉತ್ಸವ, ಮಾ.22 ರಂದು ದೇವಸ್ಥಾನದಲ್ಲಿ ಅಯ್ಯಚಾರ ಹಾಗೂ ಶ್ರೀ ಅನ್ನದಾನೇಶ್ವರ ಮಠದಿಂದ ಕುಂಭ ಮೆರವಣಿಗೆ, ಸಂಜೆ ರಥೋತ್ಸವ ನಡೆಯಲಿದೆ. ಮಾ.23ರಂದು ಪಟ್ಟಣದ ಪ್ರಮುಖ ಬಿದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ ಎಂದರು.

ಪ್ರಮುಖರಾದ ಕರಿಸಿದ್ದಪ್ಪ ಕುಷ್ಟಗಿ, ಬಸವರಾಜ ಹಳ್ಳೂರು, ವಿಶ್ವನಾಥ ಕನ್ನೂರು, ಮಹಾಂತೇಶ ಅಗಸಿಮುಂದಿನ, ಅಂದಾನಯ್ಯ ಸೊಪ್ಪಿಮಠ, ರುದ್ರಗೌಡ ಗವಡಪ್ಪನವರ, ಪ್ರಶಾಂತ ಗಡಾದ, ಶ್ರೀಶೈಲ ಮೋಟಗಿ, ಮಹಾಂತಯ್ಯ ಕೋಮಾರಿ, ರಾಚಪ್ಪ ಚಿನಿವಾಲರ, ಬಸವರಾಜ ಚಿನಿವಾರ, ಮಲ್ಲಯ್ಯ ಕೋಮಾರಿ, ಶಿವಪ್ಪ ಕಂಪ್ಲಿ, ಬಸಪ್ಪ ದೋಟಿಹಾಳ, ಶರಣಪ್ಪ ಹುಬ್ಬಳ್ಳಿ, ರಮೇಶ ನಿಡಗುಂದಿ, ಈರಣ್ಣ ಹುನಗುಂಡಿ, ಗಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net