ಎಲ್ಲರೂ ಪೌಷ್ಟಿಕ ಆಹಾರ ಸೇವಿಸಲಿ

Untitled design (14)
Published on

ಹನುಮಸಾಗರ: ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಲು ಸಾಧ್ಯ ಎಂದು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ಜಾತ್ರಾ ಸಮಿತಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಅಭಿನಂದನಾ ಪತ್ರ ನೀಡಿ ಮಾತನಾಡಿದರು.

ರಕ್ತದಾನ ಮಾಡಿದರೆ ಆರೋಗ್ಯ ಸಮಸ್ಯೆ ಬರುತ್ತದೆ ಎಂಬುದು ತಪ್ಪು ಕಲ್ಪನೆ. ಇದರಿಂದ ಜನರು ಹೊರ ಬರಬೇಕು. ರಕ್ತದಾನದಿಂದ ರಕ್ತದೊತ್ತಡ, ಮಧುಮೇಹ ಕಾಯಿಲೆಗಳು ನಿಯಂತ್ರಣವಾಗಲಿವೆ. ಅಲ್ಲದೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದರು.

ಫಾಸ್ಟ್‌ಫುಡ್ ಸೇವನೆ ತ್ಯಜಿಸಿ ದೇಹಕ್ಕೆ ಶಕ್ತಿ ನೀಡುವ ಆಹಾರ ಸೇವನೆ ಮಾಡಬೇಕು. ಹೆರಿಗೆ ಸಮಯದಲ್ಲಿ ಅನೇಕ ಮಹಿಳೆಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದಾನ ಮಾಡಿದರೆ ಎರಡು ಜೀವ ಉಳಿಸಿದ ಪುಣ್ಯ ಸಿಗಲಿದೆ. ಅಪಘಾತಗಳು ಸಂಭವಿಸಿದಾಗ ರಕ್ತ ಸೀಗದೆ ಅನೇಕರು ಸಾವನ್ನಪ್ಪುತ್ತಿದ್ದಾರೆ. ಅಗತ್ಯ ಸಮಯದಲ್ಲಿ ರಕ್ತದಾನ ಮಾಡುವುದರಿಂದ ಜೀವಗಳು ಉಳಿಯಲಿವೆ ಎಂದರು.

ಪ್ರಮುಖರಾದ ಕರಿಸಿದ್ದಪ್ಪ ಕುಷ್ಟಗಿ, ಬಸವರಾಜ ಚಿನಿವಾಲರ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ಡಾ.ಶರಣು ಹವಾಲ್ದಾರ, ಬಸವಂತಪ್ಪ ಸಜ್ಜನ, ರಾಚಪ್ಪ ಚಿನಿವಾಲರ, ಸಿದ್ದರಾಮಯ್ಯ ಕರಕಂಡಿಮಠ, ಮಲ್ಲಯ್ಯ ಕೋಮಾರಿ, ಮುತ್ತಣ್ಣ ಅಗಸಿಮುಂದಿನ, ಈರಣ್ಣ ಹುನಗುಂಡಿ, ಮಹಾಂತಯ್ಯ ಕೋಮಾರಿ, ಕಳಕಪ್ಪ ಕೊರಡಕೇರಾ, ಸೂಗಯ್ಯ ಅಮಲಿಕೊಪ್ಪ, ಸುರೇಶ ಶಾಸ್ತ್ರೀ ಶರಣಪ್ಪ ಹುಬ್ಬಳ್ಳಿ, ಸತೀಶ ಜಮಖಂಡಿಕರ, ಯಮನೂರ ಮಡಿವಾಳರ ಇತರರಿದ್ದರು.

ಶ್ರೀಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ವಾಲಿಕಾರ ಮಾತನಾಡಿ, ಇಂದು ಗ್ರಾಮೀಣ ಸೊಗಡು ಉಳಿಯಲು ಹಳ್ಳಿಗಳು ಸಾಕ್ಷಿಯಾಗಿವೆ. ಈ ಹಿಂದೆ ಆರೋಗ್ಯದ ಗುಟ್ಟು ಮನೆಯಲ್ಲಿತ್ತು. ದೈನಂದಿನ ಆಹಾರಕ್ಕಾಗಿ ಕುಟ್ಟುವುದು, ಬೀಸುವುದು ಸೇರಿ ನಿತ್ಯದ ದೈಹಿಕ ಶ್ರಮದ ಕಾಯಕಗಳು ಗ್ರಾಮೀಣ ಭಾಗದಲ್ಲಿ ಕಾಣುತ್ತಿದ್ದವು. ಸದ್ಯ ಮಷಿನ್‌ಗಳ ಸಹವಾಸದಿಂದ ಕಾಣೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net