

ಹನುಮಸಾಗರ: ಇಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಗುರುವಾರ 123 ಬೀದಿ ನಾಯಿಗಳನ್ನು ಕೇರಳದ ಅಯ್ಯಪ್ಪನ್ ತಂಡದ ಸದಸ್ಯರು ಗ್ರಾಪಂ ಸಿಬ್ಬಂದಿ ಸಹಾಯದೊಂದಿಗೆ ಸೆರೆ ಹಿಡಿದರು.
ವಾರ್ಡ್‌ಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ಹಾಗೂ ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದವು. ಹೀಗಾಗಿ ಗ್ರಾಪಂ ಆಡಳಿತ ಬೀದಿ ನಾಯಿಗಳನ್ನು ಹಿಡಿಯಲು ಕೇರಳದಿಂದ ತಂಡವೊಂದನ್ನು ಕರೆಯಿಸಿದೆ.
ಇಲ್ಲಿನ ಹಳೇ ಬಸ್ ನಿಲ್ದಾಣ, ಚಿಕನ್ ಅಂಗಡಿಗಳ ಮುಂಭಾಗ, ಎಪಿಎಂಸಿ ಮುಂಭಾಗ, ಆಶ್ರಯ ಕಾಲನಿ, ಅಂಬೇಡ್ಕರ್ ನಗರ, ಕಲ್ಲೋಣಿ, ಬನಶಂಕರಿ ದೇಗುಲದ ಹತ್ತಿರ, ಸರ್ವೋದಯ ಶಿಕ್ಷಣ ಸಂಸ್ಥೆ, ಪಿಯು ಕಾಲೇಜಿಗೆ ಹೋಗುವ ರಸ್ತೆ ಸೇರಿ ವಿವಿಧೆಡೆ ಬೀದಿ ನಾಯಿಗಳ ಕಾಟ ತೀವ್ರಗೊಂಡಿತ್ತು. ನಾಯಿ ಕಡಿತಕ್ಕೆ ಜನರು ಭಯಭೀತರಾಗಿದ್ದು, ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗಿದ್ದವು. ತಂಡದಲ್ಲಿ ಮೂರು ಜನರಿದ್ದು, ಅವರೊಂದಿಗೆ ಗ್ರಾಪಂ ಸಿಬ್ಬಂದಿ ನಾಯಿಗಳನ್ನು ಹಿಡಿದರು. ಇನ್ನೂ ಬೀದಿ ನಾಯಿಗಳಿದ್ದು, ಇನ್ನೇರಡು ದಿನಗಳ ಕಾರ್ಯಾಚರಣೆ ನಡೆಸಲಾಗುವುದು ಎಂದು ಗ್ರಾಮಾಡಳಿತ ತಿಳಿಸಿದೆ.
ವಿವಿಧ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಅವುಗಳನ್ನು ಹಿಡಿಯಲು ತಂಡ ಆಗಮಿಸಿದೆ. ಜನರು ಸಾಕು ನಾಯಿಗಳನ್ನು ಮನೆಯ ಆವರಣದಲ್ಲಿ ಕಟ್ಟಿ ಹಾಕಬೇಕು. ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಿ, ಬೇರೆ ಪ್ರದೇಶಗಳಿಗೆ ಬಿಟ್ಟು ಬರಲಾಗುತ್ತದೆ. ರುದ್ರಗೌಡ ಗೌಡಪ್ಪನವರ ಗ್ರಾಪಂ ಅಧ್ಯಕ್ಷ ಹನುಮಸಾಗರ