ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕರ ಸಹಿಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಸಹಸ್ರಾರ್ಜುನ ಸೇವಾ ಟ್ರಸ್ಟ್‌ನಿಂದ ಊಟದ ತಟ್ಟೆ ಹಾಗೂ ಲೋಟಗಳನ್ನು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಟ್ರಸ್ಟ್ ಅಧ್ಯಕ್ಷ ರಾಘವೇಂದ್ರಸಾ ಬಸ್ವಾ, ಎಸ್ಡಿಎಂಸಿ ಸದಸ್ಯ ಬಸವರಾಜ ದ್ಯಾವಣ್ಣನವರ, ಶಿಕ್ಷಕ ಮೈಬೂಬ ಕಂದಗಲ್, ಟ್ರಸ್ಟ್ ಉಪಾಧ್ಯಕ್ಷ ವಿನಾಯಕ ರಾಯಬಾಗಿ, ಕಾರ್ಯದರ್ಶಿ ಗಣಪತಿಸಾ ಮೆಹರವಾಡೆ, ಖಜಾಂಜಿ ಯಲ್ಲೂಸಾ ರಂಗ್ರೇಜ, ಸದಸ್ಯರಾದ ಶ್ರೀನಿವಾಸ ಬಸ್ವಾ, ಗುರು ರಾಯಬಾಗಿ, ಅಂಬಾಸಾ ಮೆಹರವಾಡೆ, ವಿನೋದ ಪಾಟೀಲ್, ವಿಜಯ ಕಾಟ್ವಾ, ನಾಗುಸಾ ರಂಗ್ರೇಜ, ಮಂಜುನಾಥ ರಾಯಬಾಗಿ, ರಾಮು ಪಾಟೀಲ್, ಶ್ಯಾಮ ಕಾಟ್ವಾ ಇತರರಿದ್ದರು.
ಹನುಮಸಾಗರ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಸಹಸ್ರಾರ್ಜುನ ಸೇವಾ ಟ್ರಸ್ಟ್‌ನಿಂದ ಊಟದ ತಟ್ಟೆ ಹಾಗೂ ಲೋಟಗಳನ್ನು ದೇಣಿಗೆ ನೀಡಲಾಯಿತು.
ಟ್ರಸ್ಟ್ ಅಧ್ಯಕ್ಷ ರಾಘವೇಂದ್ರಸಾ ಬಸ್ವಾ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರ ಬಿಸಿಯೂಟ ಹಾಗೂ ಹಾಲು ನೀಡುತ್ತಿದೆ. ಮಕ್ಕಳಿಗೆ ಊಟಕ್ಕೆ ತಟ್ಟೆ ಹಾಗೂ ಹಾಲು ಕುಡಿಯಲು ಲೋಟ ಅವಶ್ಯಕವಾಗಿ ಬೇಕಾಗಿದೆ. ಹಾಗಾಗಿ ಮಕ್ಕಳಿಗೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಟ್ರಸ್ಟ್‌ನಿಂದ 101 ಊಟದ ತಟ್ಟೆಗಳು ಹಾಗೂ 101 ಕುಡಿಯುವ ನೀರಿನ ಲೋಟಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.