ಜಲಪಾತ ವೀಕ್ಷಣೆಗೆ ಹೆಚ್ಚು ಜನ ಬೇಡ

03102020 Hanumasagar kapila jalapata Additional DC vist
Published on

ಹನುಮಸಾಗರ: ಮಾಸ್ಕ್ ಧರಿಸಿದವರಿಗೆ ಮಾತ್ರ ಕಪಿಲ ತಿರ್ಥ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಿ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.

ಸಮೀಪದ ಕಬ್ಬರಗಿ ಕಪಿಲ ತೀರ್ಥ ಜಲಪಾತಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಕಲ್ಯಾಣ ಕರ್ನಾಟಕದ ಪ್ರೇಕ್ಷಣಿಯ ಸ್ಥಳಗಳಲ್ಲಿ ಕಪಿಲತೀರ್ಥ ಒಂದಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೋವಿಡ್ ಇರುವುದರಿಂದ ಒಂದೇ ಸಮಯಕ್ಕೆ ಹೆಚ್ಚು ಜನರು ಜಲಪಾತ ವೀಕ್ಷಣೆಗೆ ಬಾರದಂತೆ ನೋಡಿಕೊಳ್ಳಿ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿ. ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಿಸಾಡದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಎಂದರು.

ಸಹಾಯಕ ಆಯುಕ್ತ ನಾರಾಯಣರೆಡ್ಡಿ, ಡಿಎಫ್‌ಒ ಹರ್ಷ ಬಾನು, ತಹಸೀಲ್ದಾರ್ ಎಂ. ಸಿದ್ದೇಶ, ತಾಲೂಕು ವಲಯ ಅರಣ್ಯಾಧಿಕಾರಿ ಅನ್ವರ್, ಉಪವಲಯ ಅರಣ್ಯಾಧಿಕಾರಿ ಹನುಮಂತ ನಾಯಕ, ಅರಣ್ಯ ರಕ್ಷಕ ದಾನನಗೌಡ ಮಾಲಿಪಾಟೀಲ, ಅರಣ್ಯ ವೀಕ್ಷಕ ನೀಲಪ್ಪ ಕುದರಿ, ಗ್ರಾಪಂ ಅಧ್ಯಕ್ಷ ಮಹಾಂತೇಶ ವಜ್ಜಲ್, ಪಿಡಿಒ ನಿಂಗಪ್ಪ ಮೂಲಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net