

ಹನುಮಸಾಗರ: ಇಲ್ಲಿನ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು. ಗ್ರಾಪಂ ಕಾರ್ಯಾಲಯದಲ್ಲಿ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಧ್ವಜಾರೋಹಣ ನೆರೆವೇರಿಸಿದರು.
ಉಪಾಧ್ಯಕ್ಷೆ ಗೌರಮ್ಮ ವಾಲ್ಮೀಕಿ, ಪಿಡಿಒ ನಿಂಗಪ್ಪ ಮೂಲಿಮನಿ ಇತರರಿದ್ದರು. ನಾಡಕಚೇರಿಯಲ್ಲಿ ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್, ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಬಸನಗೌಡ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ದೀಪಿಕಾ ರಾಮಾನುಜಂ, ಜೆಸ್ಕಾಂ ಕಚೇರಿಯಲ್ಲಿ ಕಿರಿಯ ಅಭಿಯಂತರ ಮೌಲಾಸಾಬ ಧ್ವಜಾರೋಹಣ ನೆರವೇರಿಸಿದರು.
ಕುರಬಗೇರಾ ಸಮಾಹಿಪ್ರಾ ಶಾಲೆ, ಹರಿಜನವಾಡ ಸಹಿಪ್ರಾ ಶಾಲೆ, ಕಲ್ಲೋಣಿ ಸಹಿಪ್ರಾ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕರ ಸಹಿಪ್ರಾ ಶಾಲೆ, ಬಾಲಕಿಯರ ಸಹಿಪ್ರಾ ಶಾಲೆ, ಉರ್ದು ಸಹಿಪ್ರಾ ಶಾಲೆ, ಬಾಲಕ ಸರ್ಕಾರಿ ಪ್ರೌಢ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಉರ್ದು ಸರ್ಕಾರಿ ಪ್ರೌಢಶಾಲೆ, ಮೌಲಾನಾ ಆಜಾದ್ ಸ್ಕೂಲ್, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, ಕಸ್ತೂರಿಬಾ ಗಾಂಧಿ ವಸತಿ ಶಾಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.