ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಲಿ

Jyoti Sanjeevini
ಹನುಮಸಾಗರ ಸಮೀಪದ ಕಾಟಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಪ್ರಾಚಾರ್ಯ ಶಿವಕುಮಾರ ಚೋಳಚಗುಡ್ಡ, ಶಿಕ್ಷಕರಾದ ಜುವೇರಿಯಾ ಗುರುಬಸಪ್ಪ ಮುಡಪಲದಿನ್ನಿ, ಮಂಜುನಾಥ ಸಿನ್ನೂರ, ಮಹಮ್ಮದ ಅಕ್ಬರ್, ಜುಮ್ಮನಗೌಡ ಮಾಲಿಮಾಟೀಲ್, ಹನುಮಂತಗೌಡ ಬಾದಾಮಿ, ಬಸವರಾಜ ಸುಳಿಕೇರಿ, ಸುಧಾ ಅಂಕದ, ಜಗದೀಶ ಸಜ್ಜಲಗುಡ್ಡ, ಮಂಜಯ್ಯ ಆದಾಪುರಮಠ ಇತರರಿದ್ದರು.
Published on

ಹನುಮಸಾಗರ: ಸಮೀಪದ ಕಾಟಾಪುರ ವಸತಿ ಶಾಲೆ ನೌಕರರು ಗುರುವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಜಿಲ್ಲಾಧ್ಯಕ್ಷ ಗುರುಬಸಪ್ಪ ಮುಡಪಲದಿನ್ನಿ ಮಾತನಾಡಿ, ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ, ಜ್ಯೋತಿ ಸಂಜೀವಿನಿ ಅನುಷ್ಠಾನ, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು, ಮನೆ ಬಾಡಿಗೆ ಕಡಿತದಿಂದ ವಿನಾಯಿತಿ, ಶೇ.10 ಭತ್ಯೆ ಮಂಜೂರಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net