

ಹನುಮಸಾಗರ: ಸಮೀಪದ ಹಿರೇಗೊಣ್ಣಾಗರ ಗ್ರಾಮದ ಕಲಬುರಗಿ ಶರಣಬಸವೇಶ್ವರರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ತೊಟ್ಟಿಲು ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಹಿಳೆಯರು ತೊಟ್ಟಿಲಿಗೆ ಅಲಂಕಾರ ಮಾಡಿ, ಸೋಬಾನ ಪದಗಳನ್ನು ಹಾಡಿದರು. ಪ್ರಮುಖರಾದ ಗುರುಸ್ವಾಮಿ, ಮಹಾಂತಯ್ಯ, ಶೇಖರಯ್ಯ, ಶರಣಯ್ಯ, ರಾಮಣ್ಣ ಕುಂಬಾರ, ಹುಚ್ಚಿರಪ್ಪ ಬಾದಿಮನಾಳ, ಬಸವರಾಜ, ರಾಮನಗೌಡ, ಶರಣಪ್ಪ, ಸಂಗಪ್ಪ, ರಾಜೇಸಾಬ, ಅಲ್ಲಾಸಾಬ ನದಾಫ್, ಕಳಕಣ್ಣ ಇತರರಿದ್ದರು.