ಹಿರೇಗೊಣ್ಣಾಗರ ಗ್ರಾಪಂಗೆ ಮಾಸಮ್ಮ ಅಧ್ಯಕ್ಷೆ

Untitled design (41)
Published on

ಹನುಮಸಾಗರ: ಸಮೀಪದ ಹಿರೇಗೊಣ್ಣಾಗರ ಗ್ರಾಪಂ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಮಾಸಮ್ಮ ಶರಣಪ್ಪ ಮೆಣಸಗೇರಿ, ಉಪಾಧ್ಯಕ್ಷರಾಗಿ ಸಂಗಪ್ಪ ಯಲ್ಲಪ್ಪ ಕುಂಬಾರ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷೆಯಾಗಿದ್ದ ಗೀತಾ ರಂಗಪ್ಪ ವಾಲಿಕಾರ ಹಾಗೂ ಉಪಾಧ್ಯಕ್ಷ ಬಸನಗೌಡ ಮಾಸ್ತಕಟ್ಟಿ ಅವರ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಹಾಗಾಗಿ ಚುನಾವಣೆ ನಿಗದಿ ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಾಸಮ್ಮ ಶರಣಪ್ಪ ಮೆಣಸಗೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಯಲ್ಲಪ್ಪ ಕುಂಬಾರ ತಲಾ ಒಂದು ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಘೋಷಿಸಿದರು. ಪಿಡಿಒ ಪ್ರಶಾಂತ ಹಿರೇಮಠ, ಗ್ರಾಪಂ ಸದಸ್ಯರು, ಸಿಬ್ಬಂದಿ, ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net