

ಹನುಮಸಾಗರ: ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಸೃಜನಶೀಲತೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಲಿದೆ ಎಂದು ಸಿಆರ್‌ಪಿ ಮಂಜುನಾಥ ಪೂಜಾರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಿಂದ ಗುರುವಾರ ಏರ್ಪಡಿಸಿದ್ದ ಹನುಮಸಾಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಲ್ಲಿ ಮಾತನಾಡಿದರು. ಎಲ್ಲ ಮಕ್ಕಳಲ್ಲೂ ವಿವಿಧ ಕಲೆಗಳು ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಮಗುವಿನ ಬೆಳವಣಿಗೆಗೆ ಅನುಕೂಲವಾಗುತ್ತದೆ. ನಿರ್ಣಾಯಕರು ಎಲ್ಲ ಮಕ್ಕಳನ್ನು ಒಂದೇ ಭಾವದಿಂದ ಕಂಡು ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಪ್ರಾಚಾರ್ಯ ಸಾಹೇಬಗೌಡ ಬಿರಾದಾರ, ಉಪಪ್ರಾಚಾರ್ಯ ಎಂ. ಎಸ್.ಬಡದಾನಿ, ಶಿಕ್ಷಣ ಸಂಯೋಜಕ ದಾವಲಸಾಬ್ ವಾಲಿಕಾರ, ಸಿಆರ್ ಪಿ ಮಂಜುನಾಥ ಪೂಜಾರ, ಗ್ರಾಪಂ ಸದಸ್ಯ ರಾದ ಮರಿಗೌಡ ಬೋದೂರು, ನಿಲ್ಲಮ್ಮ ಎಸ್., ವಿಶ್ವನಾಥ ಯಾಳಗಿ, ಪ್ರಮುಖರಾದ ಲಕ್ಷ್ಮಣ ಪೂಜಾರ, ಕಳಕಮಲ್ಲೇಶ ಜೋಗಿ, ಮಂಜುನಾಥ ಪೂಜಾರ, ಯಲ್ಲನಗೌಡ ಪಾಟೀಲ್, ಗೌರಮ್ಮ ತಳವಾರ, ಮುಖಂಡರಾದ ಹನಮಪ್ಪ ಹಕ್ಕಿ, ಮಂಜುನಾಥ ಶಿರೂರು, ಶಿವಾನಂದ ಹುಲ್ಲೂರು, ಶ್ರೀನಿವಾಸ್ ಜಹಗೀರದಾರ ಇತರರಿದ್ದರು.