ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸಿ

Untitled design (8)
Published on

ಹನುಮಸಾಗರ: ಮಕ್ಕಳು ಹಾಗೂ ಮಹಿಳೆಯರ ಆರೋಗ್ಯಕ್ಕಾಗಿ ಸರ್ಕಾರದ ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಅರ್ಹರಿಗೆ ತಲುಪಿಸಲಿ ಎಂದು ಸಿಡಿಪಿಒ ಯಲ್ಲಮ್ಮ ಹಂಡಿ ಹೇಳಿದರು.

ಸಮೀಪದ ಹನುಮನಾಳ ಗ್ರಾಮದಲ್ಲಿ ಮಂಗಳವಾರ 3 ಹಾಗೂ 5ನೇ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ತಾಯಿ ಹಾಗೂ ಮಗುವಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ತಲುಪಿಸುವ ಕಾರ್ಯವಾಗಬೇಕು. ಅಂಗನವಾಡಿಗಳಲ್ಲಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ವಹಿಸಿಸುವಂತ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಸಬೇಕು. ಕಾರ್ಯಕರ್ತೆಯರು ಹಾಗೂ ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಸುಜಾತಾ ತೆರವಪ್ಪನವರ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದರು. ವೈದ್ಯಾಧಿಕಾರಿ ಶ್ರೀದೇವಿ ವಸ್ತ್ರದ, ಅಂಗನವಾಡಿ ಮೇಲ್ವಿಚಾರಕಿಯರಾದ ಕಲಾವತಿ ಭಕ್ತನಕೊಪ್ಪ, ಶಿವಗಂಗಾ ಕುಂಬಾರ, ಪಿಡಿಒ ಪ್ರಶಾಂತ ಹಿರೇಮಠ, ಉಪಾಧ್ಯಕ್ಷೆ ಮಲ್ಲವ್ವ ಭಜಂತ್ರಿ, ಗ್ರಾಪಂ ಸದಸ್ಯರಾದ ಸಂಗಪ್ಪ ಹುಲ್ಲೂರ, ಸಂತೋಷ ಕಂಚೇರ, ಉಮೇಶ ಬೇನಾಳ, ಯಮನೂರ ಮುಶಿಗೇರಿ, ಕನಕಪ್ಪ ಪೂಜಾರ, ಭೀಮವ್ವ ತುಂಬದ, ಲಕ್ಷ್ಮೀ ಗೌಡರ, ಶರಣಪ್ಪ ಕುಂಬಾರ, ಶಾಂತಮ್ಮ ಸಾಂತಗೇರಿ, ಅಂದಮ್ಮ ಕೊಟ್ನಳ್ಳಿ, ಮುಖಂಡರಾದ ವೀರಣ್ಣ ಗಜೆಂದ್ರಗಡ, ಸಿದ್ಧಪ್ಪ ರೊಟ್ಟಿ, ಅಂದಪ್ಪ ತಳವಾರ, ಮಂಜುನಾಥ ಕೋಮಾರಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net