ಸಾಮಾಜಿಕ ಜಾಲತಾಣದ ಹಿಂದೆ ಬೀಳದೆ ಪುಸ್ತಕ ಓದಿ; ಸಿದ್ಧನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಕಿವಿಮಾತು

17012021 Hanumasagar Book Release
Published on

ಹನುಮಸಾಗರ: ಧಾರ್ಮಿಕ ಕ್ಷೇತ್ರಗಳ ಬಗ್ಗೆ ಬರೆದ ಪುಸ್ತಕಗಳನ್ನು ಓದುವುದರಿಂದ ಭಕ್ತರಲ್ಲಿ ಆ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚುತ್ತದೆ ಎಂದು ಸಿದ್ಧನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.

ಸಮೀಪದ ಹಾಬಲಕಟ್ಟಿ ಗ್ರಾಮದ ಯುವ ಲೇಖಕ ನಾಗರಾಜ ಮಡ್ಡೇರ್ ಬರೆದ ಸುಕ್ಷೇತ್ರ ಸಿದ್ಧನಕೊಳ್ಳ ಪುಸ್ತಕವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದರು. ಒಂದು ಧಾರ್ಮಿಕ ಕ್ಷೇತ್ರದ ಬಗ್ಗೆ ಪುಸ್ತಕಗಳಿದ್ದರೆ, ಅವುಗಳನ್ನು ಓದುವುದರಿಂದ ಆ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಕೇವಲ ದೇವರ ದರ್ಶನ ಪಡೆದು ಹೋಗುವ ಭಕ್ತರು ಪುಸ್ತಕದಲ್ಲಿ ಬರೆದ ಸ್ಥಳಗಳು, ದೇವರ ಮೂರ್ತಿಗಳು ಬಗ್ಗೆ ತಿಳಿಯಲು ಆಸಕ್ತಿ ತೋರಿಸುತ್ತಾರೆ. ತಿಳಿಯದ ಅನೇಕ ಸ್ಥಳಗಳು ಪುಸ್ತಕ ಓದುವುದರಿಂದ ತಿಳಿಯುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಕಾಲಕಳೆಯುವ ಬದಲು ಮಕ್ಕಳು ಪುಸ್ತಕಗಳನ್ನು ಓದಬೇಕು. ಅದರಿಂದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.

ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುಳಿಯಪ್ಪಜ್ಜ, ನಿರ್ಮಾಪಕ ಆರ್.ವಿ, ಗುರುಪಾದಮ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಶಾಸಕ ಅಮರೇಗೌ ಪಾಟೀಲ್ ಬಯ್ಯಪುರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಲೇಖಕ ನಾಗರಾಜ ಮಡ್ಡೇರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net