ಜಿಟಿಜಿಟಿ ಮಳೆ; ಗಡಚಿಂತಿ, ತುಮರಿಕೊಪ್ಪಳದಲ್ಲಿ ಮನೆ ಛಾವಣಿ, ಗೋಡೆ ಕುಸಿತ

120722 Rain Effect Gadachinti Village Home Roof Collaps
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದಲ್ಲಿ ಮಳೆಗೆ ಕಳಕಪ್ಪ ರಾಜೂರು ಮನೆಯ ಛಾವಣಿ ಕುಸಿದಿರುವುದು.
Published on

ಹನುಮಸಾಗರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನರು ಪರದಾಡುವಂತಾಗಿದೆ. ಸಮೀಪದ ಹಾಬಲಕಟ್ಟಿ ಗ್ರಾಪಂ ವ್ಯಾಪ್ತಿಯ ಗಡಚಿಂತಿ ಗ್ರಾಮದಲ್ಲಿ ಸೋಮವಾರ ಕಳಕಪ್ಪ ರಾಜೂರು ಅವರ ಮನೆಯ ಛಾವಣಿ ಕುಸಿದು ಬಿದ್ದಿದೆ. ತುಮರಿಕೊಪ್ಪದಲ್ಲಿ ರಾಯಪ್ಪ ತೋಣಸಿಹಾಳ ಮನೆ ಗೋಡೆ ಕುಸಿದಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿದ್ದರಿಂದ ನಿತ್ಯದ ಕೆಲಸಗಳಿಗೆ ತೆರಳಲು ಜನರು ಪರದಾಡುತ್ತಿದ್ದು, ಜಾನುವಾರುಗಳನ್ನು ಮೇಯಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಹೊಲಗಳಲ್ಲಿ ಕಳೆ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಬೆಳೆ ಹಾಳಾಗುವ ಭೀತಿಯಲ್ಲಿ ರೈತರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net