

ಹನುಮಸಾಗರ: ಜಲಜೀವನ ಮೀಷನ್ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ತ್ವರಿತವಾಗಿ ಮುಗಿವಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದರು.
ಇಲ್ಲಿನ ಗ್ರಾಪಂ ಕಾರ್ಯಾಲಯಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ವೇಳೆ, ಗ್ರಾಪಂ ಸದಸ್ಯರು, ಸಾರ್ವಜನಿಕರು ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಮೂರು ವರ್ಷಗಳಿಂದ ಅರೆಬರೆಯಾಗಿರುವ ವಿಷಯ ತಿಳಿಸಿದಾಗ ಪ್ರತಿಕ್ರಿಯಿಸಿದರು.
ಯರಗೇರಾ, ಡೊಣ್ಣೆಗುಡ್ಡ, ಸೇರಿ ವಿವಿಧ ಗ್ರಾಮಗಳ ಬರಗಾಲ ಕುರಿತು, ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಮಾರ್ಗ ಮಧ್ಯೆಯಲ್ಲಿ ಗ್ರಾಪಂಗೆ ಆಕಸ್ಮಿಕ ಭೇಟಿ ನೀಡಲಾಗಿದೆ.
ಗ್ರಾಪಂನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು, ಮೇವು ಬ್ಯಾಂಕ್ಸ ಹಾಗೂ ಗೋಶಾಲೆ ತೆರೆಯಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ತಹಸೀಲ್ದಾರ್ ಎಂ.ಶೃತಿ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ ಕರಡಿ,
ಎಸ್‌ಡಿಎ ವೀರನಗೌಡ ಪಾಟೀಲ, ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಸದಸ್ಯರಾದ ಚಂದ್ರು ಬೆಳಗಲ್, ಬಸವರಾಜ ದ್ಯಾವಣ್ಣವರ, ಮರೇಗೌಡ ಬೋದುರ, ಮಹ್ಮದರೀಯಾಜ ಖಾಜಿ, ಮಹಾಂತಯ್ಯ ಕೊಮಾರಿ ಸೇರಿದಂತೆ ಇದ್ದರು.