ಯೂಟ್ಯೂಬ್ ಲಿಂಕ್ ಮೂಲಕ ಪ್ರಶಸ್ತಿ ಸಮಾರಂಭ ವೀಕ್ಷಣೆ

24 Hanumasagara 3
Published on

ಹನುಮಸಾಗರ: ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ಸದಸ್ಯರು ಮತ್ತು ಸಿಬ್ಬಂದಿ ಯೂಟ್ಯೂಬ್ ಲಿಂಕ್ ಮೂಲಕ ಗಾಂಧಿ ಗ್ರಾಮ ಪ್ರಶಸ್ತಿ ಪ್ರದಾನ ಸಮಾರಂಭ ವೀಕ್ಷಿಸಿದರು.

ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ, ನರೇಗಾ ಉದ್ಯೋಗದಲ್ಲಿ ವಿಶೇಷ ಚೇತನರಿಗೆ ರಾಜ್ಯಮಟ್ಟದ ಪುರಸ್ಕಾರ ಸೇರಿ ವಿವಿಧ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಸರ್ಕಾರ ನೀಡುತ್ತಿದೆ. ಸಮೀಪದ ತುಗ್ಗಲದೋಣಿ ಗ್ರಾಪಂಗೆ ನರೇಗಾ ಉದ್ಯೋಗದಲ್ಲಿ ವಿಶೇಷಚೇತನ ರಾಜ್ಯ ಪ್ರಶಸ್ತಿ, ಕಬ್ಬರಗಿ ಹಾಗೂ ಹನುಮಸಾಗರ ಗ್ರಾಪಂಗಳಿಗೆ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿವೆ. ಕಾರ್ಯಕ್ರಮಕ್ಕೆ ಹೋಗಲು ಆಗದ ಕೆಲ ಸದಸ್ಯರು ಮತ್ತು ಸಿಬ್ಬಂದಿ ಗ್ರಾಪಂ ಕಾರ್ಯಾಲಯದಲ್ಲೇ ಸರ್ಕಾರ ನೀಡಿರುವ ಯೂಟ್ಯೂಬ್ ಲಿಂಕ್ ಮೂಲಕ ಕಾರ್ಯಕ್ರಮ ವಿಕ್ಷಣೆ ಮಾಡಿದರು. ಗ್ರಾಪಂ ಸದಸ್ಯರಾದ ಶ್ರೀಶೈಲ್ ಮೋಟಗಿ, ಬಸವರಾಜ ದ್ಯಾವಣ್ಣನವರ, ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಚಂದಯ್ಯ ಹಿರೇಮಠ, ವೀರೇಶ ಕೂರ್ನಾಳ, ಹನುಮೇಶ ನರೇಗಲ್, ಲಲಿತಾ ದ್ಯಾವಣ್ಣನವರ, ಹುಲಿಗೆಮ್ಮ ಕಬ್ಬರಗಿ, ಮೈಬೂಬ ಇಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net