

ಹನುಮಸಾಗರ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕಚೇರಿಯಿಂದ ಕುಷ್ಟಗಿ ಬಿಆರ್‌ಸಿಗೆ ಹೆಚ್ಚುವರಿ ಪುಸ್ತಕಗಳನ್ನು ಗುರುವಾರ ಮರಳಿ ಕಳುಹಿಸಿ ಕೊಡಲಾಯಿತು.
ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ಇಲ್ಲಿಯ ಸಿಆರ್‌ಸಿ ವ್ಯಾಪ್ತಿಯಲ್ಲಿ 16 ಸರ್ಕಾರಿ ಶಾಲೆಗಳಿವೆ. ಈ ಪೈಕಿ 12 ಪ್ರಾಥಮಿಕ ಹಾಗೂ 4 ಪ್ರೌಢ ಶಾಲೆಗಳಿವೆ. ಈಗಾಗಲೇ ಸರ್ಕಾರದಿಂದ ಉಚಿತ ಪಠ್ಯಪುಸ್ತಕಗಳನ್ನು ಪೂರೈಸಲಾಗಿತ್ತು. ಉಳಿದಂತೆ ಹೆಚ್ಚುವರಿ ಪುಸ್ತಕಗಳನ್ನು ಮರಳಿ ಬಿಆರ್‌ಸಿಗೆ ಕಳುಹಿಸಲಾಗುತ್ತಿದೆ. ಇದರಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ, ಗಣಿತ, ವಿಜ್ಞಾನ, ಹಾಗೂ ದೈಹಿಕ ಶಿಕ್ಷಣದ ಪುಸ್ತಕಗಳಿವೆ ಎಂದರು. ಶಿಕ್ಷಕರಾದ ಯಲಗೂರದಪ್ಪ ಬಿರಾದರ, ಬಸವರಾಜ ಕೊಪ್ಪಳದ, ಶಿವಕುಮಾರ ಮುಸಿಗೇರಿ, ಶಿವಕುಮಾರ ಸಂಗಮದ ಇತರರಿದ್ದರು.