ಸ್ವಾವಲಂಬಿ ಬದುಕು ಕಟ್ಟಿಕೊಡಲಿದೆ ಎನ್‌ಇಪಿ : ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅಭಿಮತ

14122022 hanumasagar Educational Workshop
Published on

ಹನುಮಸಾಗರ: ಪ್ರತಿಯೊಬ್ಬರಿಗೂ ಕಲಿಕೆ ಜತೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಡುವುದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಉದ್ದೇಶವಾಗಿದೆ ಎಂದು ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ರಾಜ್ಯ ಜಂಪ್‌ರೋಪ್ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸೋಮವಾರ ಮಾತನಾಡಿದರು. ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಸುವುದಲ್ಲ. ಸ್ವಾವಲಂಬಿಯಿಂದ ಬದುಕುವುದನ್ನು ಕಲಿಸುವುದಾಗಿದೆ. ಪ್ರಸ್ತುತ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಅಗತ್ಯವಿರುವ, ಗುಣಮಟ್ಟದ ಶಿಕ್ಷಣ ಖಾತ್ರಿ, ಸಮಾನ ಮತ್ತು ನ್ಯಾಯಯುತ ಶಿಕ್ಷಣ ನೀಡುವ ದೃಷ್ಟಿಕೋನದೊಂದಿಗೆ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಇದು ದೇಶದ ಶೈಕ್ಷಣಿಕ ಸಂರಚನೆಯನ್ನು ಮರು ರಚಿಸುವ, ಭಾರತೀಯ ಜ್ಞಾನ ಪರಂಪರೆ ಆಧರಿಸಿದ ಶಿಕ್ಷಣ ವ್ಯವಸ್ಥೆ ರೂಪಿಸುವ, ದೇಶದ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದರು.

ಪ್ರಾಚಾರ್ಯ ಸಾಹೇಬಗೌಡ ಬಿರಾದಾರ, ಉಪಪ್ರಾಚಾರ್ಯ ಎಂ.ಎಸ್.ಬಡದಾನಿ, ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಬಡಿಗೇರ, ಅಬ್ದುಲ್ ಕರೀಂ ವಂಟೆಳಿ, ರಾಜ್ಯ ಜಂಪ್‌ರೋಪ್ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ರಜಾಕ ಟೇಲರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಬಿಆರ್‌ಪಿ ಡಾ.ಜೀವನಸಾಬ್ ಬಿನ್ನಾಳ, ಮುಖ್ಯಶಿಕ್ಷಕರಾದ ಎಚ್.ಎಚ್. ಇಳಕಲ್, ನಂದಲಾಲ ದಲಬಂಜನ, ಮೆಹಬೂಬಸಾಬ್ ಬಾಗವಾನ, ಬಿ.ಆರ್.ಬೋಳಶೆಟ್ಟಿ, ಚಂದಪ್ಪ ಹಕ್ಕಿ, ಲೆಂಕಪ್ಪ ವಾಲಿಕಾರ, ವಿಷ್ಣು ರಜಪೂತ, ಅಮರೇಶ ತಮ್ಮಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net