

ಹನುಮಸಾಗರ: ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಕಾನೂನಿನ ಪ್ರಕಾರ ಅಪರಾಧ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ್ ಹೇಳಿದರು.
ಸಮೀಪದ ಕುಂಬಳಾವತಿ ಗ್ರಾಮದಲ್ಲಿ ಶ್ರೀ ದ್ಯಾಮಾಂಬಿಕಾ ದೇವಿ ಜಾತ್ರೆ ನಿಮಿತ್ತ ಪೊಲೀಸ್ ಹಾಗೂ ಕಂದಾಯ ಇಲಾಖೆ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಜನರು ಜಾಗೃತರಾಗಿರಬೇಕು. ಮೌಢ್ಯ ಬಿಡಬೇಕು. ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡಬಾರದು. ದೇವರನ್ನು ಒಲಿಸಿಕೊಳ್ಳಲು ಹೂವು, ಹಣ್ಣು ಹಾಗೂ ಸಿಹಿ ಅಡುಗೆ ಮಾಡಿ ಪೂಜೆ ಸಲ್ಲಿಸಬೇಕು ಎಂದರು.
ತಹಸೀಲ್ದಾರ್ ಅಶೋಕ ಶಿಗ್ಗಾವಿ ಮಾತನಾಡಿ, ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯಲ್ಲಿ ದೇವಿಗೆ ಪ್ರಾಣಿ ಬಲಿ ಬದಲು ಸಾತ್ವಿಕ ಆಹಾರದ ಪೂಜೆ ಸಲ್ಲಿಸಬೇಕು ಎಂದರು.
ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಧನಂಜಯ ಹಿರೇಮಠ, ಗ್ರಾಮಸ್ಥರಾದ ಸುಬ್ಬಾರಾವ್ ಕುಲಕರ್ಣಿ, ಹುಲ್ಲಪ್ಪ ವಡಿಗೇರಿ, ಪ್ರಕಾಶಸಿಂಗ್ ರಜಪೂತ, ಕಳಕಯ್ಯ ಹಿರೇಮಠ, ಪಕ್ಷಪ್ಪ ಹೊಸಮನಿ, ಶರಣಪ್ಪ ಹನುಮಸಾಗರ, ಶರಣಪ್ಪ ವಡಿಗೇರಿ, ಹನುಮಪ್ಪ ಕಂಡೇಕಾರ, ದ್ಯಾಮಣ್ಣ ಗೋನಾಳ, ಶೇಖಪ್ಪ ಕುಂಟೋಜಿ, ಶಿವಮಲ್ಲಪ್ಪ ಕುಂಟೋಜಿ, ಶರಣಪ್ಪ ಗುಡಿ, ಯಲಗೂರದಪ್ಪ ವಡಿಗೇರಿ, ನಾಗಪ್ಪ ಹೊಸಮನಿ ಇತರರಿದ್ದರು.