ಸಸಿ ಬಿಟ್ಟು ದಸರಾ ಉತ್ಸವಕ್ಕೆ ತೆರೆ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದ ಆಚರಣೆ

07102022 hanumasagar dasara festival
Published on

ಹನುಮಸಾಗರ: ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮುದಾಯದಿಂದ ಶುಕ್ರವಾರ ಸಾಮೂಹಿಕವಾಗಿ ಸಸಿ ಬಿಡುವ ಮೂಲಕ ದಸರಾ ಉತ್ಸವಕ್ಕೆ ತೆರೆ ಎಳೆಯಲಾಯಿತು.

ನವರಾತ್ರಿ ಉತ್ಸವ ನಿಮಿತ್ತ ಮಹಿಳೆಯರು ಮನೆಯಲ್ಲಿ ಹಾಕಿದ್ದ ವಿವಿಧ ಸಸಿಗಳನ್ನು ಸಮುದಾಯದ ಪುರುಷರು ಹಳ್ಳಕ್ಕೆ ತಂದು ಗಂಗೆಗೆ ಪೂಜೆ ಸಲ್ಲಿಸಿ ಬಾಗಿನ ಹಾಗೂ ನೈವೇದ್ಯ ಅರ್ಪಿಸಿದರು. ಪ್ರತಿ ವರ್ಷ ದಸರಾ ಹಬ್ಬದಲ್ಲಿ ಒಂದು ದಿನ ಪ್ರತಿ ಕುಟುಂಬದವರು ಒಗ್ಗೂಡಿಕೊಂಡು ಊಟದ ಕಾರ್ಯಕ್ರಮ ಏರ್ಪಡಿಸುತ್ತಾರೆ. ಒಂಬತ್ತು ದಿನಗಳಿಂದ ನಡೆದ ದಸರಾ ಉತ್ಸವಕ್ಕೆ ಸಸಿ ಬಿಡುವ ಮೂಲಕ ತೆರೆ ಎಳೆಯಲಾಗುತ್ತದೆ. ಈ ವೇಳೆ ಸಮುದಾಯದವರು ಪರಸ್ಪರ ಬುತ್ತಿ ಹಂಚಿ ಸಂಭ್ರಮಿಸುತ್ತಾರೆ. ಅರ್ಚಕ ತಿಪ್ಪಣಸಾ ಬಸೂದೆ, ಗಣಪತಿಸಾ ಮೆಹರವಾಡೆ, ನಾರಾಯಣಸಾ ರಾಯಬಾಗಿ, ಪ್ರಲ್ಹಾದ್ ಬಸೂದೆ, ನವೀನ ದಾನಿ, ಗೋಪಿನಾಥ ಪಾಟೀಲ್, ಅಂಬಾಸ ಹುಬ್ಬಳಿ, ಅಂಬಾಸಾ ತುಳಸಿಕಟ್ಟಿ, ಯಲ್ಲುಸಾ ರಾಯಬಾಗಿ, ಗಣಪತಿಸಾ ನಿರಂಜನ, ಪರಶುರಾಮ ಪಾಟೀಲ್, ಶಂಕರಸಾ ಮೆಹರವಾಡೆ, ರಾಜು ಹಾದಿಮನಿ, ಪ್ರಲ್ಹಾದಸಾ ಬಸೂದೆ, ಅಶೋಕ ರಾಯಬಾಗಿ, ಗಿರೀಶ ರಂಗ್ರೇಜ್, ವಿನಾಯಕ ರಾಯಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net