ವಿಭಾಗ ಮಟ್ಟಕ್ಕೆ ಆಯ್ಕೆಯಾದ ಹನುಮಸಾಗರದ ಮಹಿಳಾ ಖೋಖೋ ತಂಡ

12092022 Hanumasagar sports
Published on

ಹನುಮಸಾಗರ: ಕೊಪ್ಪಳದಲ್ಲಿ ನಡೆದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಟ್ಟಣದ ಮಹಿಳಾ ಖೋಖೋ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಆಯೋಜಿಸಿದ್ದ ಕ್ರೀಡಾಕೂಟದ ಖೋಖೋ ಪಂದ್ಯದಲ್ಲಿ ದೀಪಾ ಕೋರಿವಾಳ, ಶ್ರೀದೇವಿ ಬಿಂಗಿ, ಅನುರಾಧ ಬಾಗಲಿ, ಶಬಾನಾ ಜೀಪದಾರ, ಸಾನಿಯಾ ಗೌಡ, ಸವಿತಾ ಗುಡಗದ್ದಿ, ಸಂಜನಾ ರಾಮದುರ್ಗಾ, ಭೂಮಿಕಾ ತಾಲಕೇರಿ, ಸ್ನೇಹಾ ಸಿನ್ನೂರು, ಶರಣಮ್ಮ ಕಲ್ಲಗೊನಾಳ, ಹೇಮಾ ಕಲ್ಲಗೊನಾಳ ಉತ್ತಮ ಪ್ರದರ್ಶನ ತೋರಿ, ಪ್ರಶಸ್ತಿ ಪಡೆದರು. ತರಬೇತುದಾರರಾದ ಶರಣಪ್ಪ ಮಡಿವಾಳರ, ಮುತ್ತು ಚಿಲಕಿ ಮಾರ್ಗದರ್ಶನ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net