

ಹನುಮಸಾಗರ: ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು. ವಕ್ಕನದುರ್ಗಾದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ನಡಿಗೆಯಲ್ಲಿ ಭಾನುವಾರ ಮಾತನಾಡಿದರು. ಬಡವರು ಹಸಿವಿನಿಂದ ಇರಬಾರದೆಂದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಅಲ್ಲದೆ ಕ್ಷೀರಭಾಗ್ಯ, ಅನ್ನಭಾಗ್ಯ, ಶೂಭಾಗ್ಯ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಅಭಿವೃದ್ಧಿಗಾಗಿ ಶ್ರಮಿಸಿ ನುಡಿದಂತೆ ನಡೆದಿದ್ದೇವೆ ಎಂದರು.
ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ, ತಾಲೂಕು ಘಟಕದ ಅಧ್ಯಕ್ಷೆ ನಿರ್ಮಲಾ ಮುತ್ತಣ್ಣ ಕರಡಿ, ಮುಖಂಡರಾದ ಶಿವಶಂಕರಗೌಡ ಪಾಟೀಲ್, ಸಂಗಯ್ಯ ವಸ್ತ್ರದ, ದೇವೇಂದ್ರಪ್ಪ ಬಳೂಟಗಿ, ಸುರೇಶ ಕುಂಟನಗೌಡ್ರ, ಮಹಾಂತೇಶ ಹಾಗಲದಾಳ, ಫಕೀರಪ್ಪ ಚಳಗೇರ, ದುರಗೇಶ ಮಡಿವಾಳರ, ಸೋಮಶೇಖರ ವೈಜಾಪುರ, ಕಲ್ಲಪ್ಪ ತಳವಾರ, ಶಕುಂತಲಮ್ಮ ಹಿರೇಮಠ, ಭುವನೇಶ್ವರಿ ಮೋಟಗಿ ಇತರರಿದ್ದರು.