

ಹನುಮಸಾಗರ: ಕ್ರಿಯಾತ್ಮಕ ಚಟುವಟಿಕೆ ಮೂಲಕ ಬೋಧನೆ ಮಾಡಿದಾಗ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಲಿದೆ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಪಟ್ಟಣದ ಹರಿಜನವಾಡ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಎಫ್‌ಎಲ್‌ಎನ್ ಆಧಾರಿತ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಜಾರಿಗೆ ತರುವ ಯೋಜನೆಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ. ಈ ರೀತಿಯ ವಾತಾವರಣದಲ್ಲಿ ಮಕ್ಕಳಿಗೆ ಕಲಿಯಲು ತುಂಬಾ ಅನುಕೂಲವಾಗಿರುತ್ತದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಬೆಳವಣಿಗೆಗೆ ಸಹಕರಿಯಾಗಲಿದೆ ಎಂದರು.
ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಕರು ಹಾಗೂ ಪಾಲಕರು ಹೆಚ್ಚಿನ ಗಮನ ಹರಿಸಿ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಬೇಕು. ಕ್ರಿಯಾತ್ಮಕವಾಗಿ ಬೋಧನೆ ಮಾಡಿದರೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಬರಲಿದೆ ಎಂದರು.
ಗ್ರಾಪಂ ಸದಸ್ಯರಾದ ಶಿವಪ್ಪ ಕಂಪ್ಲಿ, ಬಸವರಾಜ ದ್ಯಾವಣ್ಣನವರ, ಸಂಗಮೇಶ ಕರಂಡಿ, ಗುತ್ತಿಗೆದಾರ ದುರಗೇಶ ಮಡಿವಾಳರ, ಪ್ರಮುಖರಾದ ವೆಂಕಟೇಶ ಪೂಜಾರ, ಮುತ್ತಣ್ಣ ಸಂದಿಮನಿ, ಮುಖ್ಯಶಿಕ್ಷಕರಾದ ಬಸವರಾಜ ವಡ್ಡರ, ಬಸಪ್ಪ ಬಮಡಿವಡ್ಡರ, ಭಾರತಿ ದೇಸಾಯಿ, ಅಶೋಕ ಕಟ್ಟಿಮನಿ, ಗೌರಮ್ಮ ಇತರರಿದ್ದರು.