

ಹನುಮಸಾಗರ: ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಛತ್ರಪತಿ ಶಿವಾಜಿ ಜಯಂತಿ ಆಚರಿಸಬೇಕು ಎಂದು ಪಿಎಸ್‌ಐ ಎಚ್.ಸುನೀಲ್ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಿವಾಜಿ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಫೆ.23ರಂದು ಶಿವಾಜಿ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು. ಕಾನೂನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗವುದು. ಯುವಕರಿಗೆ ಹಿರಿಯ ಮುಖಂಡರು ತಿಳಿಹೇಳಬೇಕು ಎಂದರು. ಅಪರಾಧ ವಿಭಾಗದ ಪಿಎಸ್‌ಐ ಶ್ರೀಶೈಲ್ ಕುಲಕರ್ಣಿ, ಎಎಸ್‌ಐ ರಾಮಚಂದ್ರ ಮುರಾರಿ, ಪೇದೆ ಬಾಳನಗೌಡ ಪಾಟೀಲ್, ಗ್ರಾಪಂ ಸದಸ್ಯರಾದ ರಮೇಶ ಬಡಿಗೇರ, ಚಂದ್ರು ಬೆಳಗಲ್, ಮುಖಂಡರಾದ ಶಿವಪುತ್ರಪ್ಪ ಕೊಳ್ಳೂರು, ಸೂಚಪ್ಪ ದೇವರಮನಿ, ತಿಮ್ಮನಗೌಡ ಪೊಲೀಸ್ ಪಾಟೀಲ್, ನಾಗರಾಜ ಹಕ್ಕಿ, ವೀರೇಶ ಕಟಗಿ, ದ್ಯಾಮಣ್ಣ ಬಿಂಗಿ, ಶರಣಪ್ಪ ಬೋದುರು, ವಿರೇಶ ಈಳಗೇರ, ವಿಜಯ ಕುಷ್ಟಗಿ ಇತರರಿದ್ದರು.