ಜನಸಂಖ್ಯೆ ಹೆಚ್ಚಳದಿಂದ ಸಂಪನ್ಮೂಲಗಳ ಕೊರತೆ

UNTILETED 17
Published on

ಹನುಮಸಾಗರ: ಪತಿಗಳು ಒಂದು ಬೇಕು ಎರಡು ಸಾಕು ಎಂಬ ಮಕ್ಕಳ ನೀತಿ ಅನುಸರಿಸಿದರೆ ದೇಶದಲ್ಲಿ ಜನಸಂಖ್ಯೆ ನಿಯಂತ್ರಣವಾಗಲು ಸಾಧ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶರಣಪ್ಪ ರಾಜೂರು ಹೇಳಿದರು.

ಸಮೀಪದ ಚಳಗೇರಾ ಗ್ರಾಮದ ಸಂತೆ ಮಾರುಕಟ್ಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿದರು. ಜನಸಂಖ್ಯೆ ಹೆಚ್ಚಳದಿಂದ ಬಡತನ, ಅನಕ್ಷರತೆ, ನಿರುದ್ಯೋಗ ಹೆಚ್ಚಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಕೊರತೆಯಾಗಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂದು, ಎರಡು ಮಕ್ಕಳಗಳಿದ್ದರೆ ಉತ್ತಮ ಶಿಕ್ಷಣ ಕೋಡಿಸಬಹುದು. ಸಂತಾನ ನಿಯಂತ್ರಣಕ್ಕೆ ಮಾತ್ರೆಗಳು ಹಾಗೂ ಚುಚ್ಚುಮದ್ದುಗಳು ಬಂದಿವೆ. ಅವುಗಳ ಸದುಪಯೋಗ ಪಡಿಸಿಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ಸೋಮಣ್ಣ ಕಲ್ಡೋಣಿ ಉದ್ಘಾಟಿಸಿದರು. ಸದಸ್ಯ ಮಹಾಂತೇಶ ಹಡಪದ, ವೈದ್ಯಾಧಿಕಾರಿ ಡಾ.ರಮೇಶ ಗಂಗನಾಳ, ಸಮುದಾಯ ಆರೋಗ್ಯ ಅಧಿಕಾರಿ ಸಾವಿತ್ರಿ ಹಿರೇಮಠ, ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಮೇಶ ಅಂಗಡಿ, ಆಶಾ ಕಾರ್ಯಕರ್ತೆಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net