ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಗರಂ

Hanumasagara New Busstand MLA Visit
ಹನುಮಸಾಗರದ ಹೊಸ ಬಸ್‌ನಿಲ್ದಾಣಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಬುಧವಾರ ಭೇಟಿ ನೀಡಿ, ಮಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿದರು.
Published on

ಹನುಮಸಾಗರ: ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಬುಧವಾರ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಿದರು.

ಸಾರಿಗೆ ನಿಯಂತ್ರಕರು ಸತತವಾಗಿ ಗೈರಾಗಿರುತ್ತಾರೆ. ನಿಲ್ದಾಣದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ಅವ್ಯವಸ್ಥೆಯಿಂದ ಪ್ರಯಾಣಿಕರು ತೊಂದರೆಗೊಳಗಾಗುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಶಾಸಕರು ಹೊಸ ಬಸ್‌ನಿಲ್ದಾಣಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿಯ ಅವ್ಯವಸ್ಥೆ, ಸಾರಿಗೆ ನಿಯಂತ್ರಕರ ಗೈರು, ಸೌಕರ್ಯಗಳ ಕೊರತೆ ಕಂಡು ಗರಂ ಆದರು. ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಅವ್ಯವಸ್ಥೆ ಕುರಿತು ಶಾಸಕ ಬಳಿ ದೂರು ಹೇಳಿದರು.

ಶಾಸಕರು ತಕ್ಷಣವೇ ಸಾರಿಗೆ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು. ಕೂಡಲೇ ಸಾರಿಗೆ ನಿಯಂತ್ರಕರ ಮೇಲೆ ಕ್ರಮ ಕೈಕೊಳ್ಳಬೇಕು. ಪ್ರಯಾಣಿಕರಿಗೆ ಸೌಕರ್ಯಗಳನ್ನು ಒದಗಿಸಬೇಕೆಂದು ತಾಕೀತು ಮಾಡಿದರು.

ಮುಖಂಡರಾದ ಸಂಗಯ್ಯ ವಸ್ತ್ರದ, ಮಹಾಂತೇಶ ಅಗಸಿಮುಂದಿನ, ಸೋಮಶೇಖರ ವೈಜಾಪುರ, ಮಂಜು ಹುಲ್ಲೂರ, ರಿಯಾಜ್ ಖಾಜಿ, ಹನುಮಂತಪ್ಪ ರಾಠೋಡ, ಖಾಜೇಸಾಬ್ ಡಾಲಾಯತ, ಚಂದ್ರು ಹಿರೇಮನಿ, ರಾಘು ವಡ್ಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net