ನಿಯಮಿತ ರಕ್ತದಾನದಿಂದ ಸಮಸ್ಯೆಗಳಿಲ್ಲ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿಕೆ

Blood Donation Camp
ಹನುಮಸಾಗರದ ಶ್ರೀ ಅನ್ನದಾನೇಶ್ವರ ಮಠದಲ್ಲಿ ರಕ್ತದಾನ ಮಾಡಿದವರಿಗೆ ಪ್ರಶಂಸಾ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಭಾರತೀಯ ರೇಡ್‌ಕ್ರಾಸ್ ಸಂಸ್ಥೆ ಮುಖ್ಯಸ್ಥ ದೇವೇಂದ್ರಪ್ಪ ಹಿಟ್ನಾಳ, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಸಂಗಯ್ಯ ವಸ್ತ್ರದ, ಪ್ರಶಾಂತ ಕುಷ್ಟಗಿ, ವಿಶ್ವನಾಥ ಕನ್ನೂರ, ಮಹಾಂತಯ್ಯ ಕೋಮಾರಿ, ಅಂದಾನಯ್ಯ ಸೊಪ್ಪಿಮಠ, ಮಲ್ಲಯ್ಯ ಕೋಮಾರಿ ಇತರರಿದ್ದರು.
Published on

ಹನುಮಸಾಗರ: ರಕ್ತದಾನದಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.

ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಜಾತ್ರೆ ನಿಮಿತ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡಿದರು. ಆಧುನಿಕ ಆಹಾರ ಪದ್ಧತಿ ರಕ್ತ ಹೀನತೆಯಿಂದ ಬಳಲುವಂತೆ ಮಾಡಿದೆ. ಪೌಷ್ಟಿಕ ಆಹಾರ ಸೇವನೆ ಇದನ್ನು ತಡೆಗಟ್ಟಬಹುದು.

ಸರಿಯಾದ ಸಮಯಕ್ಕೆ ರಕ್ತ ಸಿಗದೆ ಅಪಘಾತದಲ್ಲಿ ಗಾಯಾಳು ಸಾವನಪ್ಪುತ್ತಿದ್ದಾರೆ. ಜೀವ ಉಳಿಸಲು ರಕ್ತದಾನ ಮುಖ್ಯ. ರಕ್ತದಾನದಿಂದ ಅಧಿಕ ರಕ್ತದೊತ್ತಡ, ಮಧು ಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುತ್ತವೆ. ಇದರೊಂದಿಗೆ ರಕ್ತದಾನ ಮಾಡಿದ ಆತ್ಮತೃಪ್ತಿ ಸಿಗುತ್ತದೆ. ನಿಯಮಿತವಾಗಿ ರಕ್ತದಾನ ದಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.

ರೇಡ್‌ಕ್ರಾಸ್ ಸಂಸ್ಥೆ ಮುಖ್ಯಸ್ಥ ದೇವೇಂದ್ರಪ್ಪ ಹಿಟ್ನಾಳ, ಸಿಬ್ಬಂದಿ, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಸಂಗಯ್ಯ ವಸ್ತ್ರದ, ಪ್ರಶಾಂತ ಕುಷ್ಟಗಿ, ವಿಶ್ವನಾಥ ಕನ್ನೂರ, ಮಹಾಂತಯ್ಯ ಕೋಮಾರಿ, ಅಂದಾನಯ್ಯ ಸೊಪ್ಪಿಮಠ, ಮಲ್ಲಯ್ಯ ಕೋಮಾರಿ, ಶ್ರೀಶೈಲಪ್ಪ ಮೋಟಗಿ, ಸಂಗಮೇಶ ಕರಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net