ಪೌಷ್ಟಿಕ ಆಹಾರ ನೀಡಲು ಒತ್ತು ನೀಡಿ: ಅಕ್ಷರ ದಾಸೋಹದ ಎಡಿ ಕೆ.ಶರಣಪ್ಪ ಕಿವಿಮಾತು

4 Hanumasagara 2
Published on

ಹನುಮಸಾಗರ: ಶಿಕ್ಷಕರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನದ ಜತೆಗೆ ಪೌಷ್ಟಿಕ ಬಿಸಿಯೂಟ ಸಿಗುವಂತೆ ನೋಡಿಕೊಳ್ಳಬೇಕು ಅಕ್ಷರ ದಾಸೋಹದ ತಾಲೂಕು ಸಹಾಯಕ ನಿರ್ದೇಶಕ ಕೆ.ಶರಣಪ್ಪ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಶನಿವಾರ ತಾಲೂಕು ಅಕ್ಷರದಾಸೋಹ ಸಿಬ್ಬಂದಿಗೆ ಏರ್ಪಡಿಸಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ 54 ಸಾವಿರ ವಿದ್ಯಾರ್ಥಿಗಳಿಗೆ 800 ಜನ ಅಡುಗೆ ಸಿಬ್ಬಂದಿ ಆಹಾರ ತಯಾರಿಸುತ್ತಿದ್ದಾರೆ. ಕಡಿಮೆ ವೇತನದಲ್ಲಿ ಗುಣಮಟ್ಟದ ಆಹಾರ ತಯಾರಿಸುವುದು ಅವರ ಸೇವಾ ಮನೋಭಾವಗೆ ಸಾಕ್ಷಿ. ಬಿಸಿಯೂಟದಿಂದ ವಿದ್ಯಾರ್ಥಿಗಳ ಅಪೌಷ್ಟಿಕ ನಿವಾರಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ ಮಾತನಾಡಿ, ಅಡುಗೆ ತಯಾರಿಸುವ ಮುನ್ನ ತರಕಾರಿಗಳನ್ನು ಸ್ವಚ್ಛ ಮಾಡಬೇಕು. ಗುಣಮಟ್ಟ ಪರಿಶೀಲನೆ ಮಾಡಬೇಕು. ಅಡುಗೆ ಸಿಬ್ಬಂದಿ ಕರ್ತವ್ಯದಲ್ಲಿ ಲೋಪವೆಸಗಿದರೆ, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಎಚ್ಚರಿಕೆಂದ ಕೆಲಸ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ವಿರೂಪಾಕ್ಷಪ್ಪ ಅಂಗಡಿ, ವೈದ್ಯ ಬೀರಪ್ಪ ವಡಗಲಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕರಾದ ಹುಸೇನಸಾಬ್ ಇಳಕಲ್, ನಂದೂಲಾಲ್ ದಲಬಂಜನ್, ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣಪ್ಪ, ತಾಲೂಕು ಅಧ್ಯಕ್ಷೆ ಹಲೀಮಾ, ಪಶುವೈದ್ಯ ಪ್ರವೀಣ, ಕಳಕಪ್ಪ ನಿರ್ವಾಣಿ, ಉಮಾಕಾಂತ, ಚಂದ್ರಶೇಖರ ಗುಳೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net