

ದೇವದುರ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹನುಮಂತ್ರಾಯ ಶಾಖೆ ಶನಿವಾರ ಪುನರಾಯ್ಕೆ ಆಗುವ ಮೂಲಕ ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಮುಂದುರಿಯಲಿದ್ದಾರೆ.
ಚುನಾವಣೆಯಲ್ಲಿ 34 ಮತಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹನುಮಂತ್ರಾಯ ಶಾಖೆ 29ಮತ ಪಡೆದರೆ ಪ್ರತಿಸ್ಪರ್ಧಿ ಶಾಂತಗೌಡ 5ಮತ ಪಡೆದರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಶರಣಯ್ಯ 28ಮತ ಪಡೆದರೆ ಪ್ರತಿಸ್ಪರ್ಧಿ ಪ್ರವೀಣ ಕುಮಾರ 6ಮತ ಪಡೆದಿದ್ದಾರೆ. ಖಜಾಂಚಿ ಸ್ಥಾನದ ಸ್ಪರ್ಧಿ ಜಗದೀಶ 27ಮತ ಪಡೆದರೆ ಪ್ರತಿಸ್ಪರ್ಧಿ ತಿಮ್ಮಪ್ಪ ನಾಯಕ 6ಮತ ಪಡೆದು ಪರಾಭವಗೊಂಡರು.
ದೈಹಿಕ ಶಿಕ್ಷಣಾಧಿಕಾರಿ ಮುದುಕಪ್ಪ ಗರುಡವಾಹನ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಹನುಮಂತ್ರಾಯ ಶಾಖೆ ದೈಹಿಕ ಶಿಕ್ಷಕರಾಗಿದ್ದು, ಶರಣಯ್ಯ ಕಂದಾಯ ಇಲಾಖೆ ಹಾಗೂ ಜಗದೀಶ ಪದವಿಪೂರ್ವ ಕಾಲೇಜು ನೌಕರರಾಗಿದ್ದಾರೆ. ಗೆಲುವು ಸಾಧಿಸಿದವರಿಗೆ ನೌಕರರ ಸಂಘದ ಮುಖಂಡರು ಸನ್ಮಾನಿಸಿದರು. ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಮಲ್ಲನಗೌಡ ಗುಂಡಗುರ್ತಿ, ಮಹಾದೇವ ಪಾಟೀಲ್, ಭೀಮರಾಯ ಮೇಟಿ, ನಾಗರಾಜ ಪಾಟೀಲ್, ಮಹಾದೇವಪ್ಪ, ರೇವಣ್ಣ ಸಿದ್ದಪ್ಪ, ಅಭಿಷೇಕ ಇತರರಿದ್ದರು.