ಜೆಡಿಎಸ್ ಪಕ್ಷದಿಂದ ಪತ್ರಕರ್ತ ಜಮಾದಾರ್ ಗೆ ಸನ್ಮಾನ

oplus_2
oplus_2
Published on
ಗದಗ: ಹಿರಿಯ ಪತ್ರಕರ್ತ ಹನುಮಾನ ಸಿಂಗ್ ಜಮಾದಾರ ಅವರಿಗೆ 2023 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದ್ದಕ್ಕಾಗಿ ಜೆಡಿಎಸ್ ರಾಜ್ಯ ಘಟಕ, ಜಿಲ್ಲಾ ಘಟಕದಿಂದ ಶನಿವಾರ ಸನ್ಮಾನಿಸಲಾಯಿತು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಮಾತನಾಡಿ, ವಿಶಾಲ ಕರ್ನಾಟಕ ಪತ್ರಿಕೆಯಿಂದ ಹನುಮಾನ್ ಸಿಂಗ್ ಜಮಾದಾರ್ ತಮ್ಮ ವೃತ್ತಿ ಆರಂಭಿಸಿದರು. ಕಳೆದ ಮೂರು ದಶಕಗಳಿಂದ ವೃತ್ತಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
1990 ರಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಅವರು ಹಲವಾರು ಪತ್ರಿಕಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜಡಿಎಸ್ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ ಮತ್ತು ನಮ್ಮ ಕರ್ತವ್ಯವು ಹೌದು ಎಂದರು.
ರಮೇಶ ಹುನಸಿಮರದ, ಬಸವರಾಜ ಅಪ್ಫಣ್ಣವರ, ಸಂತೋಷ ಪಾಟೀಲ, ಪ್ರಫುಲ್ ಪುಣೆಕರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net